ಹೊಸ ಫೀಚರ್ : ಫೋನ್ ನಲ್ಲಿ ಮಾಸ್ಕ್ ಹಾಕಿಕೊಂಡೇ ಅನ್‍ಲಾಕ್ ಮಾಡ್ಬೋದು!?
ಶನಿವಾರ, 29 ಜನವರಿ 2022 (06:00 IST)
ವಾಷಿಂಗ್ಟನ್ : ನೀವು ಮಾಸ್ಕ್ ಧರಿಸಿರುವಾಗ ನಿಮ್ಮ ಫೋನ್ ಅನ್ನು ಫೇಸ್ ಐಡಿ ಮೂಲಕ ಅನ್ಲಾಕ್ ಮಾಡುವುದು ಇಲ್ಲಿಯವರೆಗೆ ಅಸಾಧ್ಯವಾಗಿತ್ತು.
ಆದರೆ ಈಗ ಐಫೋನ್ ಹೊಸ ಫೀಚರ್ ಒಂದನ್ನು ಪರೀಕ್ಷಿಸುತ್ತಿದೆ. ಇದರ ಪ್ರಕಾರ ನೀವು ನಿಮ್ಮ ಮಾಸ್ಕ್ ಧರಿಸಿರುವಾಗಲೂ ಫೇಸ್ ಐಡಿಯಲ್ಲಿ ಫೋನ್ ಅನ್ಲಾಕ್ ಮಾಡಬಹುದು.
ಈ ಹಿಂದೆ ಇದೇ ರೀತಿಯಾಗಿ ಐಫೋನ್ ಆಪಲ್ ವಾಚ್ನ ಮುಖಾಂತರ ಮಾಸ್ಕ್ ಧರಿಸಿಕೊಂಡೇ ಫೋನ್ ಅನ್ಲಾಕ್ ಮಾಡುವ ಫೀಚರ್ ತಂದಿತ್ತು. ಆದರೆ ಇದಕ್ಕೆ ಆಪಲ್ ವಾಚ್ನ ಅಗತ್ಯ ಬೀಳುತ್ತಿತ್ತು. ಕೇವಲ ಆಪಲ್ ವಾಚ್ ಹೊಂದಿದವರು ಮಾತ್ರವೇ ಈ ಫೀಚರ್ ಬಳಸಬಹುದಿತ್ತು. ಇದೀಗ ಆಪಲ್ ವಾಚ್ನ ಅಗತ್ಯ ಇಲ್ಲದೇ ಫೋನ್ ಅನ್ನು ಮಾಸ್ಕ್ ಧರಿಸಿಕೊಂಡೇ ಅನ್ಲಾಕ್ ಮಾಡಲು ಐಫೋನ್ ಸಾಧ್ಯವಾಗಿಸಲಿದೆ.
ಐಒಎಸ್ 15.4ರ ಬೀಟಾದಲ್ಲಿ ಈ ಫೀಚರ್ ಅನ್ನು ಪರೀಕ್ಷಿಸಬಹುದು. ಫೇಸ್ ಮಾಸ್ಕ್ ಧರಿಸಿಕೊಂಡೇ ನಿಮ್ಮ ಮುಖ ಪರಿಚಯವನ್ನು ಪತ್ತೆ ಹಚ್ಚುವಂತೆ ನಿಮ್ಮ ಐಫೋನ್ ಅನ್ನು ಹೊಂದಿಸಬಹುದು. ಇದಕ್ಕಾಗಿ ನೀವು ಫೋನ್ನ ಸೆಟ್ಟಿಂಗ್ಸ್ಗೆ ಹೋಗಿ ಫೇಸ್ ಐಡಿ ಹಾಗೂ ಪಾಸ್ಕೋಡ್ ಸೆಟ್ಟಿಂಗ್ನಲ್ಲಿ ಯೂಸ್ ಫೇಸ್ ಐಡಿ ವಿತ್ ಮಾಸ್ಕ್ ಆಯ್ಕೆಗೆ ಅನುಮತಿ ನೀಡಬೇಕು.