ಮಾಸ್ಕ್ ಬೇಕಿಲ್ಲ, ಬ್ರಿಟನ್ನಲ್ಲಿ ಎಲ್ಲ ನಿರ್ಬಂಧ ತೆರವು

ಶುಕ್ರವಾರ, 21 ಜನವರಿ 2022 (09:41 IST)
ಲಂಡನ್ :  ವಿಶ್ವಾದ್ಯಂತ ಕೊರೋನಾ ವೈರಸ್ಸಿನ ರೂಪಾಂತರಿ ತಳಿ ಒಮಿಕ್ರೋನ್ ಅಬ್ಬರಿಸುತ್ತಿರುವ ನಡುವೆಯೇ, ರೂಪಾಂತರಿಯಿಂದ ನಲುಗಿದ್ದ ಬ್ರಿಟನ್ನಲ್ಲಿ ಸೋಂಕು ಇಳಿಮುಖವಾಗುತ್ತಿದೆ.

ಹೀಗಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮುಂದಿನ ಗುರುವಾರದಿಂದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಲಾಗಿದ್ದ ಹೆಚ್ಚುವರಿ ನಿರ್ಬಂಧದ ಕ್ರಮಗಳನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ.

ಬ್ರಿಟನ್ನಲ್ಲಿ ಒಮಿಕ್ರೋನ್ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ನಿತ್ಯ 2 ಲಕ್ಷದಷ್ಟು ದಾಖಲಾಗುತ್ತಿದ್ದ ಪ್ರಕರಣಗಳು ಈಗ ಸರಾಸರಿ 90 ಸಾವಿರದ ಆಸುಪಾಸಿಗೆ ಇಳಿದಿವೆ. ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಪ್ರಕಾರ, ಮುಂದಿನ ದಿನಗಳಲ್ಲಿ ಮನೆಯಿಂದಲೇ ಕೆಲಸ ಮಾಡಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಲು ಕಡ್ಡಾಯವಾಗಿ ಕೋವಿಡ್ ಲಸಿಕೆ ಪ್ರಮಾಣಪತ್ರ ಹೊಂದಿರಬೇಕು ಎಂಬ ನಿಯಮಗಳನ್ನು ಹಿಂಪಡೆಯಲಾಗುತ್ತದೆ.

ಏಕೆ ನಿರ್ಬಂಧ ರದ್ದು?

- ನಿತ್ಯ 2 ಲಕ್ಷದಷ್ಟು ಬರುತ್ತಿದ್ದ ಕೇಸ್ ಈಗ 90 ಸಾವಿರಕ್ಕೆ ಇಳಿಕೆ
- ಕೋವಿಡ್ ಈಗ ಎಂಡೆಮಿಕ್ ಆಗಿದೆ ಎಂದು ತಜ್ಞರ ಹೇಳಿಕೆ
- ಬೂಸ್ಟರ್ ಡೋಸ್ನಿಂದಾಗಿ ಸೋಂಕು ಸಾಕಷ್ಟು ನಿಯಂತ್ರಣ
- ಆಸ್ಪತ್ರೆ, ಐಸಿಯುಗೆ ಸೇರುವವರ ಸಂಖ್ಯೆ ಗಣನೀಯ ಇಳಿಕೆ
- ಕೊರೋನಾದಿಂದ ಈಗ ಸಾಮಾನ್ಯ ಶೀತದಂತೆ ಆಗಿರುವುದು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ