ನಿತ್ಯಾನಂದನಿಗೆ ಭಾರತದಲ್ಲಿರೋ ಹಿಂದೂ ವಿರೋಧಿಗಳಿಂದ ಕಿರುಕುಳ

ಶುಕ್ರವಾರ, 3 ಮಾರ್ಚ್ 2023 (09:00 IST)
ಬರ್ರೆನ್ : ನಿತ್ಯಾನಂದನಿಗೆ ಭಾರತದಿಂದ ಕಿರುಕುಳ ನೀಡುತ್ತಿಲ್ಲ. ಆದ್ರೆ ಭಾರತದಲ್ಲಿರುವ ಕೆಲವು ಹಿಂದೂ ವಿರೋಧಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕೈಲಾಸ ಯುನೈಟೆಡ್ ಸ್ಟೇಟ್ಸ್ನ ಶಾಶ್ವತ ರಾಯಭಾರಿ ವಿಜಯಾಪ್ರಿಯಾ ನಿತ್ಯಾನಂದ ಸ್ಪಷ್ಟನೆ ನೀಡಿದ್ದಾರೆ.
 
ಇತ್ತೀಚೆಗೆ ಜಿನಿವಾದಲ್ಲಿ ನಡೆದ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆಯಲ್ಲಿ ಸ್ವಯಂಘೋಷಿತ ದೇವಮಾನವ ಹಾಗೂ ಕೈಲಾಸ ದೇಶದ ಸಂಸ್ಥಾಪಕ ಸ್ವಾಮಿ ನಿತ್ಯಾನಂದನ ಶಿಷ್ಯೆ ಭಾಗವಹಿಸಿದ್ದರು ಎಂದು ಹೇಳಲಾಗಿತ್ತು.

ಈ ಸಭೆಯಲ್ಲಿ ನಿತ್ಯಾನಂದಗೆ ತನ್ನ ಜನ್ಮಸ್ಥಳದಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ನಿತ್ಯಾನಂದನ ಶಿಷ್ಯೆ, ಹಿಂದೂ ವಿರೋಧಿಗಳ ವಿರುದ್ಧ ಕ್ರಮಕ್ಕೆ ಅಗ್ರಹಿಸಿದ್ದಾರೆ.

ಫೆಬ್ರವರಿ 24 ರಂದು ನಡೆದ ಮಹಾಸಭೆಯಲ್ಲಿ ನೀಡಿದ್ದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಿತ್ಯಾನಂದ ತಮ್ಮ ಜನ್ಮಸ್ಥಳದಲ್ಲಿ ಕೆಲವು ಹಿಂದೂ ವಿರೋಧಿಗಳಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ನಾನು ಹೇಳಿದ್ದೆ. ಕೈಲಾಸ ಯುನೈಟೆಡ್ ಸ್ಟೇಟ್ಸ್ ಭಾರತವನ್ನು ಉನ್ನತ ಗೌರವದಿಂದಲೇ ಕಾಣುತ್ತದೆ. ಈಗಲೂ ಭಾರತವನ್ನು ಗುರುಪೀಠವೆಂದೇ ಗೌರವಿಸುತ್ತದೆ ಎಂದು ಹೇಳಿದ್ದಾರೆ. 
.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ