ಶಾಂಘೈ ಶೃಂಗ ಸಭೆಯಲ್ಲಿ ಮೋದಿ, ಜಿನ್ ಪಿಂಗ್ ಭಾರೀ ಕ್ಲೋಸ್: ಪಾಕ್ ಪ್ರಧಾನಿ ಸೀನ್ ನಲ್ಲೂ ಇಲ್ಲ
ಏಷ್ಯಾ ದೈತ್ಯ ರಾಷ್ಟ್ರಗಳು ಒಂದಾಗಿರುವ ಶಾಂಘೈ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಕೂಡಾ ಪಾಲ್ಗೊಂಡಿದ್ದಾರೆ. ನಿನ್ನೆಯಿಂದ ಇಂದಿನವರೆಗೆ ಶೃಂಗಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಪುಟಿನ್, ಜಿನ್ ಪಿಂಗ್ ಭಾರೀ ಸ್ನೇಹಿತರಂತೆ ಹರಟುತ್ತಿದ್ದಾರೆ.
ಒಂದು ವಿಡಿಯೋದಲ್ಲಿ ಈ ಮೂವರ ಜೊತೆಗೆ ಬೇರೆ ರಾಷ್ಟ್ರಗಳ ನಾಯಕರೂ ಸೇರಿಕೊಂಡು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ಆದರೆ ಈ ದೃಶ್ಯದಲ್ಲಿ ಪಾಕಿಸ್ತಾನ ಪ್ರಧಾನಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರಿಂದ ಮೋದಿ ಅಂತರವನ್ನು ಕಾಯ್ದುಕೊಂಡಿದ್ದಾರೆ.
ಇತ್ತೀಚೆಗೆ ಪಹಲ್ಗಾಮ್ ಸಂಘರ್ಷದ ವೇಳೆಯೂ ಪಾಕಿಸ್ತಾನದ ಬೆಂಬಲಕ್ಕೆ ಚೀನಾ ನಿಂತಿತ್ತು. ಆದರೆ ಈಗ ಅಮೆರಿಕಾದ ಸುಂಕ ನೀತಿಯಿಂದಾಗಿ ಭಾರತ-ಚೀನಾ ನಡುವಿನ ಸಂಬಂಧ ವೃದ್ಧಿಯಾಗಿದೆ. ಇದರಿಂದ ಪಾಕಿಸ್ತಾನಕ್ಕೂ ಇರಿಸುಮುರಿಸು ತಂದಿರುವುದು ಸ್ಪಷ್ಟವಾಗಿದೆ.