ಟ್ರಂಪ್ ಸೊಕ್ಕು ಮುರಿಯಲು ಚೀನಾಗೆ ಬಂದಿಳಿದ ಪ್ರಧಾನಿ ಮೋದಿ

Krishnaveni K

ಶನಿವಾರ, 30 ಆಗಸ್ಟ್ 2025 (18:20 IST)
ನವದೆಹಲಿ: ಡೊನಾಲ್ಡ್ ಟ್ರಂಪ್ ಸೊಕ್ಕು ಮುರಿಯಲು ಏಷ್ಯಾ ದೈತ್ಯ ರಾಷ್ಟ್ರಗಳು ಒಂದಾಗಿದ್ದು ಶಾಂಘೈ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಚೀನಾಗೆ ಬಂದಿಳಿದಿದ್ದಾರೆ.

ಜಪಾನ್ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ನೇರವಾಗಿ ಚೀನಾಗೆ ಬಂದಿಳಿದಿದ್ದಾರೆ. ಏಳು ವರ್ಷಗಳ ಬಳಿಕ ಅವರು ಚೀನಾಗೆ ಭೇಟಿ ನೀಡುತ್ತಿದ್ದಾರೆ. ಗಲ್ವಾನ್ ಘರ್ಷಣೆ ಬಳಿಕ ಭಾರತ-ಚೀನಾ ಸಂಬಂಧ ಹದಗೆಟ್ಟಿತ್ತು. ಆದರೆ ಈಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ ಹೇರಿರುವುದರಿಂದ ಭಾರತ-ಚೀನಾ ಸಂಬಂಧ ಮತ್ತೆ ಗಟ್ಟಿಯಾಗುತ್ತಿದೆ.

ಇದೀಗ ಶಾಂಘೈ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಪ್ರಧಾನಿ ಮೋದಿ ಚೀನಾಗೆ ಕಾಲಿಟ್ಟಿದ್ದಾರೆ. ಸೋಮವಾರದವರೆಗೆ ಶಾಂಘೃ ಶೃಂಗ ಸಭೆಯಿರಲಿದೆ. ಹೀಗಾಗಿ ಎರಡು ದಿನ ಪ್ರಧಾನಿ ಮೋದಿ ಚೀನಾದಲ್ಲಿಯೇ ಉಳಿದುಕೊಳ್ಳಲಿದ್ದಾರೆ.

ಈ ವೇಳೆ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ಮಾತುಕತೆ ನಡೆಸಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಾ ಈ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಈ ಶೃಂಗ ಸಭೆ ಅಮೆರಿಕಾ ನಿದ್ದೆಗೆಡಿಸುವುದು ಖಚಿತ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ