ನಕಲಿ ಖಾತೆಗಳಿಗೆ ಟ್ವೀಟರ್ ಒಪ್ಪಂದ ಇಲ್ಲ : ಎಲಾನ್ ಮಸ್ಕ್

ಬುಧವಾರ, 18 ಮೇ 2022 (12:04 IST)
ಮೈಕ್ರೋ ಬ್ಲಾಗಿಂಗ್ ಪ್ಲಾಟಫಾರ್ಮ್ ಟ್ವೀಟರ್ ಸ್ಪ್ಯಾಮ್ ಖಾತೆಗಳ ಬಗ್ಗೆ ಸ್ಪಷ್ಟತೆ ಪಡೆಯದೆ, ಒಪ್ಪಂದಕ್ಕೆ ಮುಂದಾಗುವುದಿಲ್ಲ ಎಂದು  ಬಿಲಿಯನೇರ್ ಎಲಾನ್ ಮಸ್ಕ್ ಹೇಳಿದ್ದಾರೆ. 

ಹೀಗಾಗಿ ಎಲಾನ್ ಮಸ್ಕ್ ಟ್ವೀಟರ್ ಖರೀದಿಯಲ್ಲಿ ಮತ್ತಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಸ್ಪೇಸ್ಎಕ್ಸ್ ಮತ್ತು ಟೆಸ್ಲಾ ಮುಖ್ಯಸ್ಥ ಮಸ್ಕ್ರನ್ನು ಫೋರ್ಬ್ಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಪಟ್ಟಿಮಾಡಿದೆ.

ಮಸ್ಕ್ ಸುಮಾರು $230 ಬಿಲಿಯನ್ (ಸುಮಾರು ರೂ. 17,87,479 ಕೋಟಿ) ಸಂಪತ್ತು ಹೊಂದಿದ್ದಾರೆ. ಇದರ ಬಹುಭಾಗ ಟೆಸ್ಲಾ ಸ್ಟಾಕ್ನಲ್ಲಿದೆ. ಮಸ್ಕ್ ಟ್ವಿಟರ್  ಖರೀದಿಸಲು ಬಯಸುತ್ತಾರೆ ಎಂಬ ಸುದ್ದಿಯೊಂದಿಗೆ ಏಪ್ರಿಲ್ನಲ್ಲಿ ಅನೇಕ ಹೂಡಿಕೆದಾರರನ್ನು ಆಶ್ಚರ್ಯಗೊಳಿಸಿದ್ದರು.

ಈ ಬಳಿಕ ಸಾಮಾಜಿಕ ಜಾಲತಾಣ ಕಂಪನಿ ಟ್ವೀಟರ್ ಸುದ್ದಿಯಲ್ಲಿದೆ. ಅಲ್ಲದೇ ಕಂಪನಿಯಲ್ಲಿ ಪ್ರಮುಖ ಉದ್ಯೋಗಿಗಳ ವಜಾ ಸೇರಿದಂತೆ ಸಾಕಷ್ಟು ಬದಲಾವಣೆಗಳಾಗಿವೆ ಎಂದು ವರದಿಗಳು ತಿಳಿಸಿವೆ.

ಆದರೆ ನಕಲಿ ಖಾತೆಗಳ ಸಂಖ್ಯೆ ಅಥವಾ "ಬಾಟ್ಗಳ" ಸಾಮಾಜಿಕ ಮಾಧ್ಯಮ ಕಂಪನಿಯ ಅಂದಾಜುಗಳ ಕುರಿತು ಪ್ರಶ್ನೆಗಳು ಬಾಕಿ ಉಳಿದಿರುವುದರಿಂದ ಮಸ್ಕ್ರ ಟ್ವಿಟರ್ ಖರೀದಿಸುವ $44 ಶತಕೋಟಿ (ಸುಮಾರು ರೂ. 3,41,910 ಕೋಟಿ) ಬಿಡ್ ಈಗ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

"ನಿನ್ನೆ, ಟ್ವೀಟರ್ನ ಸಿಇಓ  ಶೇಕಡಾ 5ಕ್ಕಿಂ ಕಡಿಮೆ ನಕಲಿ ಖಾತೆಗಳಿರುವುದರ ಬಗ್ಗೆ ಪುರಾವೆಗಳನ್ನು ತೋರಿಸಲು ಸಾರ್ವಜನಿಕವಾಗಿ ನಿರಾಕರಿಸಿದರು," ಎಂದು ಸಾಮಾಜಿಕ ನೆಟ್ವರ್ಕ್ನಲ್ಲಿ ಸುಮಾರು 94 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಮಸ್ಕ್ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ