ಮೂರನೇ ಮಗುವಾದರೆ ಆಫರ್ ನೀಡಿದ ಕಂಪನಿ!?

ಶುಕ್ರವಾರ, 6 ಮೇ 2022 (09:53 IST)
ಬೀಜಿಂಗ್ : ಜನಸಂಖ್ಯೆಯಲ್ಲಿ ನಂಬರ್ 1 ಸ್ಥಾನ ಪಡೆದಿರುವ ಚೀನಾದಲ್ಲಿ ಇದೀಗ ಜನಸಂಖ್ಯೆ ಕಡಿಮೆಯಾಗುತ್ತಿದೆ.
 
ಜನಸಂಖ್ಯಾ ಅಭಿವೃದ್ಧಿ ದರ ಬಹುತೇಕ ಶೂನ್ಯಕ್ಕೆ ತಲುಪಿದೆ. ಇದರಿಂದ ಕಂಗೆಟ್ಟಿರುವ ಚೀನಾದ ಖಾಸಗಿ ಕಂಪೆನಿಯೊಂದು ದಂಪತಿಗೆ ಮೂರನೇ ಮಗುವಾದರೆ 11 ಲಕ್ಷ ರೂ. ನೀಡುವುದಾಗಿ ಆಫರ್ ನೀಡಿದೆ.

ಚೀನಾದಲ್ಲಿ ಜನಸಂಖ್ಯಾ ಅಭಿವೃದ್ಧಿ ದರ ಬಹುತೇಕ ಶೂನ್ಯಕ್ಕೆ ತಲುಪಿದೆ. 2019ರಲ್ಲಿ 140 ಕೋಟಿ ಇದ್ದ ಜನಸಂಖ್ಯೆಗೆ ಹೋಲಿಸಿದರೆ ಕಳೆದ ಒಂದು ವರ್ಷದಲ್ಲಿ ದೇಶದ ಜನಸಂಖ್ಯೆಯಲ್ಲಿ ಕೇವಲ 1 ಕೋಟಿಯಷ್ಟು ಮಾತ್ರವೇ ಏರಿಕೆ ಆಗಿದೆ ಎಂದು ಇತ್ತೀಚಿಗೆ ಬಿಡುಗಡೆ ಮಾಡಲಾದ 7ನೇ ರಾಷ್ಟ್ರೀಯ ಜನಗಣತಿ ಮಾಹಿತಿ ಸ್ಪಷ್ಟಪಡಿಸಿದೆ.

ಇದರಿಂದ ಚೀನಾದಲ್ಲಿ ಮುಂಬರುವ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಹಾಗೂ ಖರೀದಿ ಸಾಮರ್ಥ್ಯ ಇಳಿಕೆ ಆಗುವ ಅಪಾಯ ಎದುರಾಗಿದೆ. ಇದನ್ನು ತಡೆಗಟ್ಟಲು ಚೀನಾ ಸರ್ಕಾರ ಇದೀಗ ಪ್ಲಾನ್ ಮಾಡುತ್ತಿದೆ.

ಸರ್ಕಾರ ಜನಸಂಖ್ಯೆ ಏರಿಕೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಜೊತೆಗೆ ಖಾಸಗಿ ಕಂಪನಿಗಳು ಸರ್ಕಾರದ ಜೊತೆ ಕೈಜೋಡಿಸಲು ತಯಾರಿ ನಡೆಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ