ಚೀನಾದಲ್ಲಿ ತೈಲ ದರ ಭಾರೀ ಇಳಿಕೆ

ಮಂಗಳವಾರ, 29 ನವೆಂಬರ್ 2022 (10:24 IST)
ಲಂಡನ್ : ಚೀನಾದಲ್ಲಿ ಕೋವಿಡ್ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಇಳಿಕೆಯಾಗಿದೆ.

ಒಂದು ಬ್ಯಾರೆಲ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯಟ್ ಕಚ್ಚಾ ತೈಲ ದರ 74 ಡಾಲರ್ಗೆ (6,040 ರೂ.) ಇಳಿಕೆಯಾಗಿದೆ. ಡಿಸೆಂಬರ್ ಬಳಿಕ ರಷ್ಯಾ ಉಕ್ರೇನ್ ಯುದ್ಧದಿಂದ 139 ಡಾಲರ್ಗೆ ಏರಿಕೆಯಾಗಿದ್ದ ದರ ಮೊದಲ ಬಾರಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಚೀನಾದಲ್ಲಿ ಕೋವಿಡ್  ನಿಯಂತ್ರಣ ಮಾಡಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು ಬಿಗಿಯಾದ ಲಾಕ್ಡೌನ್ ಜಾರಿ ಮಾಡಿದೆ. ಪರಿಣಾಮ ಭಾರೀ ಸಂಖ್ಯೆಯಲ್ಲಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಮ್ರ ಶೇ.1.7, ಕಬ್ಬಿಣದ ಅದಿರು, ಶೇ.2, ತೈಲ ದರ ಶೇ.5.4 ರಷ್ಟು ಕುಸಿದಿದ್ದರೆ ಅಡುಗೆ ತೈಲದ ದರ ಶೇ.3 ರಷ್ಟು ಕುಸಿದಿದೆ. ಚೀನಾದಲ್ಲಿ ಭಾನುವಾರ 39,791 ಕೇಸ್ ದಾಖಲಾಗಿದ್ದರೆ ಸೋಮವಾರ 40,052 ಕೊರೊನಾ ಕೇಸ್ ದಾಖಲಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ