ಅರಬ್ ರಾಷ್ಟ್ರಗಳ ಜತೆ ನಮ್ಮ ಸಂಬಂಧ ತುಂಬಾ ಹಳೆಯದು-ಪ್ರಧಾನಿ ಮೋದಿ ಗುಣಗಾನ

ಭಾನುವಾರ, 11 ಫೆಬ್ರವರಿ 2018 (12:16 IST)
ದುಬೈ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಯುಎಇ ಪ್ರವಾಸದ ಹಿನ್ನೆಲೆ ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ಮೋದಿ ದುಬೈನ ಓಪೆರಾ ಹೌಸ್ ನಲ್ಲಿ ಸಂವಾದ ನಡೆಸಿದರು.


ಅರಬ್ ರಾಷ್ಟ್ರಗಳ ಜತೆ ನಮ್ಮ ಸಂಬಂಧ ತುಂಬಾ ಹಳೆಯದು, ನಮ್ಮ ಸಂಬಂಧ ಆಡಳಿತಕ್ಕೆ ಸೀಮಿತವಾಗಿಲ್ಲ, ಸಹಕಾರದ್ದು ಎಂದು ಮೋದಿ ಗುಣಗಾನ ಮಾಡಿದ್ದಾರೆ. ಈ ಸದ್ಭಾವನೆ ಸಂಬಂಧ ಅಬುದಾಬಿಯಲ್ಲಿ ಹಿಂದೂ ದೇವಾಲಯಕ್ಕೆ ಶಿಲಾನ್ಯಾಸ ಮಾಡಲಾಗಿದೆ ಎಂದು ಮೋದಿ ಹೇಳಿದರು.


ಕಳೆದ ನಾಲ್ಕು ವರ್ಷಗಳಿಂದ ಭಾರತೀಯರ ಆತ್ಮವಿಶ್ವಾಸ ಹೆಚ್ಚಳವಾಗಿದೆ. ನಾವು ಸಹ ವಿಶ್ವದ ಮಟ್ಟಿಗೆ ಬೆಳೆಯಬಲ್ಲೆವು ಅನ್ನುವ ವಿಶ್ವಾಸ ಬೆಳೆದಿದೆ. ಯಾವ ಕೆಲಸ ಇಷ್ಟವಾಗುತ್ತೋ, ಶ್ರೇಯಸ್ಸು ಗಳಿಸುತ್ತೋ ಆ ಕೆಲಸವನ್ನು ಮಾಡೋಣ. ಪ್ರಿಯವಾದ ಕೆಲಸಗಳೇ ಹೆಚ್ಚು ಶ್ರೇಯಸ್ಸು ಗಳಿಸುತ್ತವೆ. ನೋಟ್ ಬ್ಯಾನಂತಹ ವಿಷಯ ನಮಗೆ ಪ್ರಿಯ, ಹಲವರಿಗೆ ಅಪ್ರಿಯವಾಗಿತ್ತು. ದೇಶದ ಹಿತದೃಷ್ಟಿಯಿಂದ ಇದು ಒಳ್ಳೆಯ ನಿರ್ಧಾರ ಅನ್ನೋದು ಗೊತ್ತಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಯುಎಇ ಪ್ರವಾಸದ ವೇಳೆ ಹೇಳಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ