ಮಾತುಕತೆ ಮಾಡಿ ಎಂದು ಭಾರತದ ಹಿಂದೆ ಇನ್ಮುಂದೆ ಅಲೆಯಲ್ಲ: ಪಾಕ್ ಆಕ್ರೋಶ
ಪ್ರತೀ ಬಾರಿ ಮಾತುಕತೆ ನಡೆಸಿದರೂ ಪಾಕ್ ಗಡಿಯಾಚೆಗಿನ ಭಯೋತ್ಪಾನೆ ಮಾತ್ರ ನಿಲ್ಲಿಸುವುದಿಲ್ಲವೆಂಬ ಕಾರಣಕ್ಕೆ ಭಾರತ ಇದೊಂದು ವ್ಯರ್ಥ ಮಾತುಕತೆ ಎಂಬ ತೀರ್ಮಾನಕ್ಕೆ ಬಂದಿದೆ. ಆದರೆ ಭಾರತದ ತೀರ್ಮಾನಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ‘ಭಾರತ ಸರ್ಕಾರ ಇನ್ನೂ ಚುನಾವಣೆ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಆ ದೇಶದ ಪ್ರಧಾನಿಗೆ ನಮ್ಮ ವಾಯುನೆಲೆ ಮೂಲಕ ಕಿರ್ಗಿಸ್ತಾನಕ್ಕೆ ತೆರಳಲು ಒಪ್ಪಿಗೆ ನೀಡಿದ್ದೆವು. ಹಾಗಿದ್ದರೂ ಅವರು ಅದನ್ನು ಬಳಸಲಿಲ್ಲ. ಇದರ ಅರ್ಥವೇನು? ಅವರು ಇನ್ನೂ ಹಿಂದುತ್ವ ಗುಂಗಿನಲ್ಲಿದ್ದಾರೆ. ನಮ್ಮ ಜತೆ ಮಾತುಕತೆ ನಡೆಸಿದರೆ ತಮ್ಮ ಮತಬ್ಯಾಂಕ್ ಗೆ ತೊಂದರೆಯಾಗಬಹುದು ಎಂಬ ಗುಂಗಿನಲ್ಲಿದ್ದಾರೆ’ ಎಂದು ಖುರೇಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.