ಕುಲಭೂಷಣ್ ಪ್ರಕರಣದ ಬೆನ್ನಲ್ಲೇ ತನ್ನ ಸೇನಾಧಿಕಾರಿ ಬಗ್ಗೆ ಮಾಹಿತಿ ಕೇಳಿದ ಪಾಕ್

ಗುರುವಾರ, 1 ಜೂನ್ 2017 (11:56 IST)
ನವದೆಹಲಿ: ಕುಲಭೂಷಣ್ ಜಾದವ್ ರನ್ನು ಗಲ್ಲಿಗೇರಿಸಲು ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ತನ್ನ ಸೇನಾ ಅಧಿಕಾರಿಯೊಬ್ಬರ  ಬಗ್ಗೆ ಭಾರತದ ಬಳಿ ಮಾಹಿತಿ ಕೇಳಿದೆ.

 
ಏಪ್ರಿಲ್ 6 ರಿಂದ ನೇಪಾಳದಿಂದ ತನ್ನ ಮಿಲಿಟರಿ ಅಧಿಕಾರಿ ಹಬೀಬ್ ಝಾಹಿರ್ ನಾಪತ್ತೆಯಾಗಿದ್ದಾರೆ. ಅವರ ಬಗ್ಗೆ ಮಾಹಿತಿ ಏನಾದರೂ ಇದ್ದರೆ ನೀಡುವಂತೆ ಭಾರತಕ್ಕೆ ಪತ್ರ ಬರೆದಿದೆ. ಇದೇ ಮೊದಲ ಬಾರಿಗೆ ಪಾಕ್ ಇಂತಹದ್ದೊಂದು ಪತ್ರ ಬರೆಯುತ್ತಿದೆ.

ಕುಲಭೂಷಣ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಅವರನ್ನು ಬಿಡಿಸಲು ಭಾರತ ಹಬೀಬ್ ರನ್ನು ಸೆರೆ ಹಿಡಿದಿಟ್ಟುಕೊಂಡಿರಬಹುದು ಎಂಬುದು ಪಾಕ್ ಗುಮಾನಿ. ಆ ಅಧಿಕಾರಿ ಭಾರತದ ಗುಪ್ತಚರ ಸಂಸ್ಥೆ ರಾ ಹಿಡಿತದಲ್ಲಿದ್ದಾರೆಂದು ಪಾಕ್ ಶಂಕಿಸುತ್ತಿದೆ.

ಆದರೆ ಭಾರತದ ಇದನ್ನು ತಳ್ಳಿ ಹಾಕಿದ್ದು, ಅಂತಹ ಯಾವುದೇ ಅಧಿಕಾರಿಯ ಬಗ್ಗೆ ತನ್ನ ಬಳಿ ಮಾಹಿತಿ ಇಲ್ಲ ಎಂದಿದೆ. ಈ ಅಧಿಕಾರಿ ಕಣ್ಮರೆ ಬಗ್ಗೆ ಪಾಕ್ ನೇಪಾಳದಲ್ಲಿ ತನಿಖೆ ನಡೆಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ