ನಾಳೆ ರಾಜ್ಯಕ್ಕೆ ಮೋದಿ, ಹೇಗಿರಲಿದೆ ಗೊತ್ತಾ ಪ್ರಧಾನಿ ವೇಳಾಪಟ್ಟಿ

Sampriya

ಶನಿವಾರ, 9 ಆಗಸ್ಟ್ 2025 (18:37 IST)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಕರ್ನಾಟಕಕ್ಕೆ ಒಂದು ದಿನದ ಭೇಟಿ ನೀಡಲಿದ್ದಾರೆ. ಈ ಭೇಟಿಯ ವೇಳೆ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಇದು ಬೆಂಗಳೂರಿನಿಂದ ಬೆಳಗಾವಿಗೆ, ಅಮೃತಸರದಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮತ್ತು ನಾಗ್ಪುರದಿಂದ (ಅಜ್ನಿ) ಪುಣೆಗೆ ಸಂಪರ್ಕ ಬೆಸೆಯಲಿದೆ.  

ನಂತರ, ಅವರು ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು ಫ್ಲ್ಯಾಗ್ ಆಫ್ ಮಾಡಲಿದ್ದಾರೆ ಮತ್ತು ಆರ್‌ವಿ ರಸ್ತೆ, ರಾಗಿಗುಡ್ಡದಿಂದ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಸವಾರಿಯನ್ನು ಕೈಗೊಳ್ಳಲಿದ್ದಾರೆ. ಪ್ರಧಾನಮಂತ್ರಿಯವರು ಬೆಂಗಳೂರಿನಲ್ಲಿ ನಗರ ಸಂಪರ್ಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮತ್ತು ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಾಳೆ ಕರ್ನಾಟಕಕ್ಕೆ ಭೇಟಿ ನೀಡಲಿರುವ ಮೋದಿ ವೇಳಾಪಟ್ಟಿ ಹೀಗಿದೆ: 

    ಆಗಸ್ಟ್​ 10, ಬೆಳಗ್ಗೆ 7.50ಕ್ಕೆ ಮೋದಿ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ
    ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್ ಎಎಲ್ ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್
    ಬೆಳಗ್ಗೆ 10.35ಕ್ಕೆ ಹೆಲಿಕಾಫ್ಟರ್ ಮೂಲಕ ಹೆಚ್ ಎಎಲ್ ಏರ್ ಪೋರ್ಟ್ ನಿಂದ ಟೇಕಾಫ್
    ಬೆಳಗ್ಗೆ 10.55ಕ್ಕೆ ಮೇಖ್ರಿ ಸರ್ಕಲ್‌ನ ಹೆಚ್ ಕ್ಯೂಟಿಸಿ ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್
    ಬೆಳಗ್ಗೆ 11 ಗಂಟೆಗೆ ಹೆಚ್ ಕ್ಯೂ ಟಿಸಿ ಹೆಲಿಪ್ಯಾಡ್‌ನಿಂದ ರಸ್ತೆ ಮಾರ್ಗವಾಗಿ ಕೆಎಸ್ಆರ್ ರೈಲ್ವೇ ನಿಲ್ದಾಣಕ್ಕೆ ಪ್ರಯಾಣ.
    ಮಾರ್ಗ ಮಧ್ಯೆ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ ಮತ್ತು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರಧಾನಿಗೆ ಸ್ವಾಗತ.
    ಬೆಳಗ್ಗೆ 11.10ಕ್ಕೆ ಕೆಎಸ್ಆರ್ ರೈಲ್ವೇ ನಿಲ್ದಾಣಕ್ಕೆ ಪ್ರಧಾನಿ ಆಗಮನ.
    ಬೆಳಗ್ಗೆ 11.15ರಿಂದ 11.20ರವರೆಗೆ ಕೆಎಸ್ಆರ್ ರೈಲ್ವೇ ನಿಲ್ದಾಣದಲ್ಲಿ 3 ವಂದೇ ಮಾತರಂ ರೈಲುಗಳಿಗೆ ಚಾಲನೆ.
    ಬೆಳಗ್ಗೆ 11.25ಕ್ಕೆ ಕೆಎಸ್ಆರ್ ರೈಲ್ವೇ ನಿಲ್ದಾಣದಿಂದ ಪ್ರಧಾನಿ ನಿರ್ಗಮನ.
    ರಸ್ತೆ ಮಾರ್ಗವಾಗಿ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಮೋದಿ ಪ್ರಯಾಣ.
    ಮಾರ್ಗ ಮಧ್ಯೆ ಸಂಗೊಳ್ಳಿ ರಾಯಣ್ಣ ವೃತ್ತ, ಸೌತ್ ಎಂಡ್ ವೃತ್ತ ಮತ್ತು ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ಪ್ರಧಾನಿಗೆ ಬಿಜೆಪಿ ಕಾರ್ಯಕರ್ತರ ಸ್ವಾಗತ.
    ಬೆಳಗ್ಗೆ 11.45ಕ್ಕೆ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಆಗಮನ.
    ಬೆಳಗ್ಗೆ 11.45ರಿಂದ ಮಧ್ಯಾಹ್ನ 12.50ರವರೆಗೆ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ
    ಮಧ್ಯಾಹ್ನ 12.50ಕ್ಕೆ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣಕ್ಕೆ ಆಗಮನ.
    ಮಧ್ಯಾಹ್ನ 12.55ಕ್ಕೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐಐಐಟಿ ಸಭಾಂಗಣಕ್ಕೆ ಆಗಮನ.
    ಮಧ್ಯಾಹ್ನ 1 ಗಂಟೆಗೆ ಸಭಾ ಕಾರ್ಯಕ್ರಮದ ವೇದಿಕೆಗೆ ಪ್ರಧಾನಿ ಆಗಮನ.
    ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೆ ಐಐಐಟಿ ಆಡಿಟೋರಿಯಂನಲ್ಲಿ ಸಭಾ ಕಾರ್ಯಕ್ರಮ.
    ಮಧ್ಯಾಹ್ನ 1.25ಕ್ಕೆ ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗ ಉದ್ಘಾಟನೆ ಮತ್ತು ಮೆಟ್ರೋ 3ನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ.
    ಮಧ್ಯಾಹ್ನ 1.30ರಿಂದ 2 ಗಂಟೆಯವರೆಗೆ ಪ್ರಧಾನಿ ಮೋದಿ ಭಾಷಣ.
    ಮಧ್ಯಾಹ್ನ 2.05ಕ್ಕೆ ಕಾರ್ಯಕ್ರಮದ ವೇದಿಕೆಯಿಂದ ಪ್ರಧಾನಿ ನಿರ್ಗಮನ
    ಮಧ್ಯಾಹ್ನ 2.15ಕ್ಕೆ ರಸ್ತೆ ಮಾರ್ಗವಾಗಿ ಹೆಲಿಪ್ಯಾಡ್ ಗೆ ಆಗಮನ
    ಮಧ್ಯಾಹ್ನ 2.20ಕ್ಕೆ ಹೆಲಿಕಾಫ್ಟರ್ ಮೂಲಕ ಹೆಚ್ಎಎಲ್ ಏರ್ ಪೋರ್ಟ್ ಗೆ ನಿರ್ಗಮನ
    ಮಧ್ಯಾಹ್ನ 2.40ಕ್ಕೆ ಹೆಚ್ ಎಎಲ್ ಏರ್ ಪೋರ್ಟ್ ‌ನಿಂದ ನವದೆಹಲಿಗೆ ಪ್ರಧಾನಿ ನರೇಂದ್ರ ಮೋದಿ ನಿರ್ಗಮನ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ