ವಜಾಗೊಂಡಿರುವ ಮುಖಂಡರ ಜತೆ ಮುಲಾಯಂ ಸಭೆ

ಮಂಗಳವಾರ, 25 ಅಕ್ಟೋಬರ್ 2016 (10:35 IST)
ಸಮಜಾವಾದಿ ಪಕ್ಷದಲ್ಲಿ ತಲೆದೋರಿರುವ ಆಂತರಿಕ ಕಲಹಕ್ಕೆ ಸಂಬಂಧಿಸಿದಂತೆ ಸಂಪುಟದಿಂದ ವಜಾ ಆಗಿರುವ ನಾಲ್ವರು ಮುಖಂಡರ ಜತೆ ಇಂದು ಮುಲಾಯಂ ಸಿಂಗ್ ಯಾದವ್ ಮತ್ತೊಂದು ಪ್ರಮುಖ ಸಭೆಯನ್ನು ನಡೆಸುತ್ತಿದ್ದಾರೆ. 

ವಜಾಗೊಂಡಿರುವ ಸಚಿವರಾದ ಶಿವಪಾಲ್ ಯಾದವ್, ಶಾದಾಬ್, ಫಾತಿಮಾ, ನಾರದಾ ರಾಯ್ ಇಂದಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 
 
ಕೇಂದ್ರ ಕಚೇರಿಯಲ್ಲಿ ಕೆಲ ಹೊತ್ತಿನಲ್ಲಿ ಸಭೆ ನಡೆಯಲಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಶಿವಪಾಲ್ ಸಿಂಗ್ ಎಲ್ಲವೂ ಸರಿಯಾಗಿದೆ, ನೇತಾಜಿ ಆದೇಶ ಏನೇ ಇರಲಿ ನಾನು ತಪ್ಪದೇ  ಪಾಲಿಸುತ್ತೇನೆ ಎಂದಿದ್ದಾರೆ.
 
ಸಭೆ ಬಳಿಕ ವಜಾ ಆಗಿರುವ ನಾಲ್ವರನ್ನು ಅಖಿಲೇಶ್ ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ. ಇಂದು ಮುಲಾಯಂ ಸಿಂಗ್ ಜತೆ ಅವರು ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಪಕ್ಷದ ಚಟುವಟಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಅಮರ್ ಸಿಂಗ್ ನಿರಾಕರಿಸಿದ್ದಾರೆ. 
 
ನಿನ್ನೆ ನಡೆದ ಪಕ್ಷದ ವರಿಷ್ಠರ ಸಭೆಯಲ್ಲಿ ಮುಲಾಯಂ ತನ್ನ ಮಗನನ್ನು ಬದಿಗೊತ್ತಿ ಸಹೋದರ ಶಿವಪಾಲ್ ಸಿಂಗ್ ಮತ್ತು ಸ್ನೇಹಿತ ಅಮರ್ ಸಿಂಗ್ ಅವರ ಪರ ನಿಂತಿದ್ದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ