ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಲೇವಡಿ
ಮಂಗಳವಾರ, 10 ಡಿಸೆಂಬರ್ 2019 (10:53 IST)
ಇಸ್ಲಾಮಾಬಾದ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪೌರತ್ವ ತಿದ್ದುಪಡಿ ಖಾಯಿದೆಗೆ ಲೋಕಸಭೆಯಲ್ಲಿ ವಿಪಕ್ಷಗಳ ವಿರೋಧದ ನಡುವೆಯೂ ಅನುಮೋದನೆ ಸಿಕ್ಕಿದೆ. ಈ ಖಾಯಿದೆ ಬಗ್ಗೆ ಇದೀಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಲೇವಡಿ ಮಾಡಿದ್ದಾರೆ.
ಈ ಖಾಯಿದೆಯಿಂದ ಕೇವಲ ಹಿಂದೂಗಳಿಗೆ ಮಾತ್ರ ಅನುಕೂಲ ಮಾಡಿಕೊಡುವ ಭಾರತ ಸರ್ಕಾರದ ಉದ್ದೇಶ ಈ ಮೂಲಕ ಬಹಿರಂಗವಾಗಿದೆ. ಹೊರಗಡೆ ಜಾತ್ಯಾತೀತ ಎನ್ನುವ ರಾಷ್ಟ್ರದ ಒಳಮುಖ ಈ ಮೂಲಕ ಬಯಲಾಗಿದೆ ಎಂದು ಇಮ್ರಾನ್ ಲೇವಡಿ ಮಾಡಿದ್ದಾರೆ.
ಭಾರತ ಸರ್ಕಾರದ ಈ ನಿರ್ಧಾರ ತಾರತಮ್ಯದಿಂದ ಕೂಡಿದೆ ಎಂಬುದು ಇಮ್ರಾನ್ ಆರೋಪ. ಪಾಕ್, ಅಫ್ಘಾನಿಸ್ತಾನ, ಬಾಂಗ್ಲಾದೇಶ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಭಾರತದಲ್ಲಿ ಆಶ್ರಯ ಕಂಡುಕೊಂಡಿರುವ ಹಿಂದೂ, ಕ್ರಿಶ್ಚಿಯನ್, ಸಿಖ್, ಮತ್ತು ಬೌದ್ಧ ಧರ್ಮೀಯರಿಗೆ ಭಾರತೀಯ ಪೌರತ್ವ ನೀಡುವ ಖಾಯಿದೆ ಇದಾಗಿದೆ. ಇದರಲ್ಲಿ ಮುಸ್ಲಿಮರನ್ನು ಮಾತ್ರ ಹೊರಗಿಡಲಾಗಿದೆ. ಇದಕ್ಕೆ ಪಾಕ್ ಪ್ರಧಾನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.