ಸಾಲ ಮಾಡುವಲ್ಲಿ ದಾಖಲೆ ಮಾಡಿದ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ
ಬುಧವಾರ, 9 ಅಕ್ಟೋಬರ್ 2019 (08:31 IST)
ಇಸ್ಲಾಮಾಬಾದ್: ಜಾಗತಿಕವಾಗಿ ಮೂಲೆಗುಂಪಾಗಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದ್ದು, ಇಮ್ರಾನ್ ಖಾನ್ ಸರ್ಕಾರ ಸಾಲ ಮಾಡುವುದರಲ್ಲೂ ದಾಖಲೆ ಮಾಡಿದೆ.
ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗುವತ್ತ ಸಾಗಿದ್ದು ಪಾಕಿಸ್ತಾನ ಕರೆನ್ಸಿ 7,509 ಬಿಲಿಯನ್ ರೂಗಳಷ್ಟು ಸಾಲ ಮಾಡಿಕೊಂಡಿದೆ. ಈ ಮೂಲಕ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಸಾಲದಲ್ಲೇ ದಾಖಲೆ ಮಾಡಿದೆ.
2018 ರಿಂದ 2019 ರ ಅವಧಿಯಲ್ಲಿ ವಿದೇಶೀ ಮೂಲಗಳಿಂದ ಪಾಕಿಸ್ತಾನ ಸರ್ಕಾರ ಸುಮಾರು 2,804 ಬಿಲಿಯನ್ ರೂ. ಮತ್ತು ದೇಶೀಯ ಬ್ಯಾಂಕ್ ಗಳು ಮತ್ತಿತರ ಮೂಲಗಳಿಂದ ಸುಮಾರು 4,705 ಬಿಲಿಯನ್ ರೂ. ಸಾಲ ಪಡೆದಿದೆ ಎಂದು ಸ್ಥಳೀಯ ಮಾಧ‍್ಯಮವೊಂದು ವರದಿ ಮಾಡಿದೆ. ತೆರಿಗೆ ಸಂಗ್ರಹದಲ್ಲೂ ವ್ಯಾಪಕ ಕುಸಿತವಾಗಿದ್ದು, ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಮಾಧ‍್ಯಮ ವರದಿ ಹೇಳಿದೆ.