ಬಂಧನದಲ್ಲಿದ್ದ ಉಗ್ರ ಮಸೂದ್ ಅಝರ್ ನನ್ನು ರಹಸ್ಯವಾಗಿ ರಿಲೀಸ್ ಮಾಡಿದ ಪಾಕಿಸ್ತಾನ

ಸೋಮವಾರ, 9 ಸೆಪ್ಟಂಬರ್ 2019 (10:44 IST)
ಇಸ್ಲಾಮಾಬಾದ್: ಭಾರತದ ವಿರುದ್ಧ ಸೈನಿಕರ ಮೂಲಕ ಇಲ್ಲವೇ ಉಗ್ರರ ಮೂಲಕ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಬಂಧಿಸಿದ್ದ ಉಗ್ರ ಮಸೂದ್ ಅಝರ್ ನನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ ಎಂಬ ಸುದ್ದಿ ಬಂದಿದೆ.


ಭಾರತದ ಗಡಿಯಲ್ಲಿ ಸೈನಿಕರನ್ನು ಜಮಾವಣೆ ಮಾಡುತ್ತಿರುವ ಪಾಕ್ ಅದರ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರನ್ನೂ ನುಸುಳಿಸಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದೆ ಎಂದು ಇತ್ತೀಚೆಗಷ್ಟೇ ಭಾರತೀಯ ಸೇನೆ ಹೇಳಿತ್ತು.

ಇದೀಗ ಮಸೂದ್ ನನ್ನು ಭಾರತದ ವಿರುದ್ಧ ಉಗ್ರ ಚಟುವಟಿಕೆ ಮಾಡಲೆಂದೇ ಬಿಡುಗಡೆ ಮಾಡಿರಬಹುದು ಎನ್ನಲಾಗಿದೆ. ಈ ವಿಚಾರವನ್ನು ಖಾಸಗಿ ವಾಹಿನಿಯೊಂದು ಬಹಿರಂಗಪಡಿಸಿದೆ. ಮೊನ್ನೆಯಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದಿಂದ ಎದುರಾಗಬಹುದಾದ ದಾಳಿಗೆ ಸಾಧ್ಯವಾದ ಎಲ್ಲಾ ರೀತಿ ಪ್ರತ್ಯುತ್ತರ ನೀಡುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ