ಭಾರತದ ರಾಷ್ಟ್ರಪತಿಗಳಿಗೆ ತನ್ನ ವಾಯನೆಲೆ ಬಳಸಲು ಅನುಮತಿ ನೀಡದ ಪಾಕ್

ಭಾನುವಾರ, 8 ಸೆಪ್ಟಂಬರ್ 2019 (07:26 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಇತ್ತೀಚೆಗೆ ಹಳಸಿರುವ ಸಂಬಂಧದ ಪರಿಣಾಮ ಈಗ ಭಾರತದ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ತನ್ನ ವಾಯುನೆಲೆ ಬಳಸಲು ಪಾಕ್ ಅನುಮತಿ ನಿರಾಕರಿಸಿದ ಘಟನೆ ನಡೆದಿದೆ.


ಸೋಮವಾರ ಐಸ್ ಲ್ಯಾಂಡ್, ಸ್ವಿಜರ್ ಲ್ಯಾಂಡ್ ಗೆ ತೆರಳಲಿರುವ ರಾಷ್ಟ್ರಪತಿಗಳಿಗೆ ಪಾಕ್ ವಾಯುನೆಲೆ ಮುಖಾಂತರ ಸಂಚರಿಸಲು ಅವಕಾಶ ನೀಡಬೇಕೆಂದು ಭಾರತದ ವಿದೇಶಾಂಗ ಇಲಾಖೆ ಮನವಿ ಮಾಡಿತ್ತು.

ಆದರೆ ಭಾರತೀಯ ನಾಯಕರಿಗೆ ತನ್ನ ವಾಯುನೆಲೆ ಬಳಸಲು ಅವಕಾಶ ನೀಡಬಾರದು ಎಂದು ಪಾಕ್ ವಿಪಕ್ಷಗಳ ಒತ್ತಡಕ್ಕೆ ಮಣಿದಿರುವ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಅನುಮತಿ ನಿರಾಕರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ