ಗಡಿಯಲ್ಲಿ ಸೇನೆ ಜಮಾವಣೆ ಮಾಡುತ್ತಿರುವ ಪಾಕ್

ಶುಕ್ರವಾರ, 6 ಸೆಪ್ಟಂಬರ್ 2019 (10:10 IST)
ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಪದೇ ಪದೇ ಕಾಲು ಕೆರೆದು ಜಗಳ ತೆಗೆಯುತ್ತಿರುವ ಪಾಕಿಸ್ತಾನ ಈಗ ಆರ್ಟಿಕಲ್ 370 ರದ್ದುಗೊಳಿಸಿದ ಮೇಲೆ ಮತ್ತಷ್ಟು ಪುಂಡಾಟ ಮೆರೆಯುತ್ತಿದೆ.


ಇದೀಗ ಗಡಿಯ ನಿಯಂತ್ರಣ ರೇಖೆಯಲ್ಲಿ ತನ್ನ ಸೇನೆ ಜಮಾವಣೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಪಾಕ್ ಆಕ್ರಮಿತ ಕಾಶ್ಮೀರ ಗಡಿ ಬಳಿ 2000 ಕ್ಕೂ ಅಧಿಕ ಸೈನಿಕರನ್ನು ಜಮಾವಣೆ ಮಾಡಿದೆ.

ಭಾರತೀಯ ಸೇನೆಯೂ ಪಾಕಿಸ್ತಾನ ಹೆಜ್ಜೆಗಳ ಮೇಲೆ ಸೂಕ್ಷ್ಮ ಕಣ್ಣಿಟ್ಟಿದ್ದು, ಯಾವುದೇ ದಾಳಿಗೂ ಪ್ರತಿದಾಳಿ ನಡೆಸಲು ಸನ್ನದ್ಧವಾಗಿದೆ. ಪಾಕಿಸ್ತಾನದ ಈ ನಡೆಯ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಾವಾಗಿಯೇ ಯಾರ ಮೇಲೂ ಆಕ್ರಮಣ ಮಾಡಲ್ಲ. ಆದರೆ ಸ್ವ ರಕ್ಷಣೆಗೆ ಸೇನೆ ಬಳಸಲು ಹಿಂಜರಿಯಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ