ಭಾರತದಲ್ಲಿ ಎಲ್ಲಿ ಬೇಕಾದರೂ ದಾಳಿ ಮಾಡಬಲ್ಲೆ ಎಂದ ನಿಷೇಧಿತ ಪಾಕ್ ಉಗ್ರ

ಸೋಮವಾರ, 3 ಜುಲೈ 2017 (11:23 IST)
ನವದೆಹಲಿ: ಭಾರತದಲ್ಲಿ ಹಿಂದೆಯೂ ದಾಳಿ ನಡೆಸಿದ್ದೇನೆ. ಮುಂದೆಯೂ ಎಲ್ಲಿ ಬೇಕಾದರೂ ದಾಳಿ ನಡೆಸುತ್ತೇನೆ ಎಂದು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯವಾಗಿ ನಿಷೇಧಕ್ಕೊಳಗಾದ ಪಾಕ್ ಮೂಲದ ಉಗ್ರ ಸಯೀದ್ ಸಲಾವುದ್ದೀನ್ ಕೊಚ್ಚಿಕೊಂಡಿದ್ದಾನೆ.


ಅಲ್ಲದೆ ತನ್ನ ವಿಧ್ವಂಸಕ ಕೃತ್ಯಗಳಿಗೆ ಪಾಕ್ ಸರ್ಕಾರವೇ ಹಣ ಒದಗಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶಸ್ತ್ರಾಸ್ತ್ರ ಖರೀದಿಸುತ್ತೇವೆ ಎಂದು ಸಲಾವುದ್ದೀನ್ ಪಾಕ್ ನ ಮುಖವಾಡ ಬಯಲು ಮಾಡಿದ್ದಾನೆ.

ಇದುವರೆಗೆ ಸಲಾವುದ್ದೀನ್ ಉಗ್ರನಲ್ಲ ಎಂದೇ ಹೇಳಿಕೊಂಡು ಬಂದಿರುವ ಪಾಕ್ ಗೆ ಆತನೇ ಈ ರೀತಿ ಟಿವಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವುದರಿಂದ ಮಾನ ಹರಾಜಾಗಿದೆ. ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಈತನನ್ನು ಪ್ರಧಾನಿ ಮೋದಿ ಅಮೆರಿಕಾ ಭೇಟಿಯ ಕೆಲವೇ ಕ್ಷಣಗಳ ಮೊದಲು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ನಿಷೇಧಿತ ಪಟ್ಟಿಗೆ ಸೇರಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ