ಪಾಕಿಸ್ತಾನ ಐದು ನಿಮಿಷಗಳಲ್ಲಿ ದೆಹಲಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ: ಡಾ.ಅಬ್ದುಲ್ ಖಾದೀರ್

ಭಾನುವಾರ, 29 ಮೇ 2016 (11:06 IST)
ಪಾಕಿಸ್ತಾನ ಕೇವಲ ಐದು ನಿಮಿಷದ ಅವಧಿಯೊಳಗೆ ದೆಹಲಿಯನ್ನು ಧ್ವಂಸಗೊಳಿಸುವಂತಹ ಸಾಮರ್ಥ ಹೊಂದಿದೆ ಎಂದು ಪಾಕಿಸ್ತಾನದ ಪರಮಾಣು ಪಿತಾಮಹ ಡಾ.ಅಬ್ದುಲ್ಲ್ ಖಾದೀರ್ ಖಾನ್ ಹೇಳಿದ್ದಾರೆ.
 
ರಾವಲ್ಪಿಂಡಿಯ ಕಹುಟಾ ಪ್ರದೇಶದಿಂದ ಕೇವಲ ಐದು ನಿಮಿಷದೊಳಗೆ ದೆಹಲಿಯ ಮೇಲೆ ದಾಳಿ ಮಾಡುವಂತಹ ತಾಕತ್ತು ಪಾಕಿಸ್ತಾನಕ್ಕಿದೆ ಎಂದು ತಿಳಿಸಿದ್ದಾರೆ.
 
ಇರಾನ್, ಸಿರಿಯಾ ಮತ್ತು ಉತ್ತರ ಕೊರಿಯಾ ದೇಶಗಳಿಗೆ ರಹಸ್ಯವಾಗಿ ಪರಮಾಣ ರಹಸ್ಯಗಳನ್ನು ಕಾನೂನುಬಾಹಿರವಾಗಿ ರವಾನಿಸಿದ್ದಾರೆ ಎನ್ನುವ ಆರೋಪ ಹೊತ್ತಿರುವ ಖಾದೀರ್ ಖಾನ್, 1998ರಲ್ಲಿ ತಮ್ಮ ಮೇಲ್ವಿಚಾರಣೆ ನಡೆದ ಪರಮಾಣು ವಾರ್ಷಿಕ ಆಚರಣೆ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿದರು.
 
ಪಾಕಿಸ್ತಾನ 1984ರಲ್ಲಿಯೇ ಪರಮಾಣ ರಾಷ್ಟ್ರವಾಗಿ ಹೊರಹೊಮ್ಮಿತ್ತು. ಆದರೆ, ಅಂದಿನ ರಾಷ್ಟ್ರಾಧ್ಯಕ್ಷ ಜನರಲ್ ಜಿಯಾ ಉಲ್ ಹಕ್ ಅದನ್ನು ಸಂಪೂರ್ಣವಾಗಿ ವಿರೋಧಿಸಿದ್ದರು ಎಂದು ತಿಳಿಸಿದ್ದಾರೆ.
 
ಒಂದು ವೇಳೆ ಪರಮಾಣು ಪರೀಕ್ಷೆ ನಡೆಸಿದಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳು ಪಾಕಿಸ್ತಾನದ ಮೇಲೆ ಸೇನಾ ಕಾರ್ಯಾಚರಣೆ ನಡೆಸಬಹುದು ಎನ್ನುವ ಆತಂಕ ಜಿಯಾ ಅವರನ್ನು ಕಾಡುತ್ತಿತ್ತು ಎಂದು ಹೇಳಿದ್ದಾರೆ.
 
ಪಾಕಿಸ್ತಾನ ದೇಶಕ್ಕೆ ಪರಮಾಣ ಕೊಡುಗೆ ಕೊಟ್ಟ ನನಗೆ ಗೌರವಕ್ಕೆ ಬದಲು ಅಪಮಾನವೇ ದೊರೆತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪಾಕ್ ಸರಕಾರ ಖಾದಿರ್ ಅವರಿಗೆ ಸಣ್ಣ ಮನೆಯೊಳಗೆ ವಾಸಿಸುವಂತೆ ಒತ್ತಡ ಹೇರಿದ್ದಲ್ಲದೇ ಯಾರನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ