ಕರಾಚಿ-ಲಾಹೋರ್ ವಿಮಾನ ಹಾರಾಟ ರದ್ದುಗೊಳಿಸಿದ ಪಾಕಿಸ್ತಾನ

ಬುಧವಾರ, 5 ಅಕ್ಟೋಬರ್ 2016 (14:35 IST)
ಭಾರತವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸುತ್ತಿರುವ ಪಾಕಿಸ್ತಾನ ಕರಾಚಿ ಮತ್ತು ಲಾಹೋರ್ ನಡುವಣ ವಿಮಾನ ಹಾರಾಟವನ್ನು 13 ದಿನಗಳ ವರೆಗೆ 18 ಗಂಟೆಗಳ ಕಾಲ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. 
 
ಅಕ್ಟೋಬರ್ 8 ರಿಂದ 13 ದಿನಗಳ ಕಾಲ ಕರಾಚಿ-ಲಾಹೋರ್ ವಿಮಾನ ಹಾರಾಟ ತೀವ್ರ ಅಸ್ಥವ್ಯಸ್ಥಗೊಳ್ಳಲಿದೆ. ಪಾಕಿಸ್ತಾನದ ಸೇನಾಪಡೆಯ ಜೆಟ್ ವಿಮಾನಗಳು ಪ್ರಾಯೋಗಿಕ ಹಾರಾಟ ನಡೆಸುತ್ತಿರುವುದರಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕ್ ಸೇನಾ ಮೂಲಗಳು ತಿಳಿಸಿವೆ.
 
ಕರಾಚಿ ನಗರ ರಾಜಸ್ಥಾನ ಮತ್ತು ಗುಜರಾತ್ ಗಡಿಗೆ ಹತ್ತಿರವಿದೆ. ಲಾಹೋರ್ ನಗರ ಜಮ್ಮು ಕಾಶ್ಮಿರ ಮತ್ತು ಪಂಜಾಬ್‌ಗೆ ತುಂಬಾ ಹತ್ತಿರವಿರುವ ಹಿನ್ನೆಲೆಯಲ್ಲಿ ಅಗತ್ಯವಾದಲ್ಲಿ ವೈಮಾನಿಕ ದಾಳಿ ನಡೆಸಲು ಪಾಕ್ ಸೇನೆ ರಣತಂತ್ರ ರೂಪಿಸುತ್ತಿದೆ. 
 
ಪಾಕಿಸ್ತಾನದ ಪರಮಾಣು ಘಟಕಗಳು ಲಾಹೋರ್‌‌ಗೆ ಹತ್ತಿರದಲ್ಲಿರುವುದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಉಭಯ ಮಹಾನಗರಗಳ ಮಧ್ಯೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ಪಾಕಿಸ್ತಾನದ ಸೇನಾ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ