India Pakistan: ಸತತ ಏಳನೇ ದಿನವೂ ಗಡಿಯಲ್ಲಿ ಕೆದಕಿದ ಪಾಕಿಸ್ತಾನ: ಭಾರತದಿಂದ ತಕ್ಕ ಪ್ರತ್ಯುತ್ತರ
ಗಡಿಯಲ್ಲಿ ನಿರಂತರವಾಗಿ ಪಾಕಿಸ್ತಾನ ಕಳೆದ ಒಂದು ವಾರದಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಇದೆ. ನಿನ್ನೆ ತಡರಾತ್ರಿಯೂ ಅಂತಾರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದೆ.
ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನ ಸೇನೆಯ ದಾಳಿ ನಿರಂತರವಾಗಿದೆ. ಮಂಗಳವಾರದಂದು ಕದನ ವಿರಾಮ ಉಲ್ಲಂಘನೆ ಕುರಿತು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಸಭೆಯನ್ನೂ ನಡೆಸಿ ಚರ್ಚೆ ನಡೆಸಿದ್ದರು. ಈ ವೇಳೆ ಪಾಕಿಸ್ತಾನಕ್ಕೆ ಅಪ್ರಚೋದಿತ ಗುಂಡಿನ ದಾಳಿ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗಿದೆ.
ಹಾಗಿದ್ದರೂ ದಾಳಿ ಮುಂದುವರಿಸಿ ಉದ್ಧಟತನ ಪ್ರದರ್ಶಿಸಿದೆ. ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸುವುದು 2003 ರ ಕದನ ವಿರಾಮ ಒಪ್ಪಂದದ ಉಲ್ಲಂಘನೆಯಾಗಿದೆ.