Operation Kellar: ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ್ದ ಮೂವರು ಉಗ್ರರು ಫಿನಿಶ್
ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಉಗ್ರರನ್ನು ಭಾರತೀಯ ಸೇನೆ ಹುಡುಕಿ ನುಗ್ಗಿ ಕೊಂದಿದೆ. ಆಪರೇಷನ್ ಕೆಲ್ಲರ್ ನಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರ ಹೆಸರುಗಳನ್ನು ಸೇನೆ ಬಹಿರಂಗಪಡಿಸಿದೆ.
ಹತರಾದ ಉಗ್ರರ ಪೈಕಿ ಶಾಹಿದ್, ಅದ್ನಾನ್ ಶಫಿ ಎಂಬ ಇಬ್ಬರು ಉಗ್ರರ ಹೆಸರು ಬಹಿರಂಗವಾಗಿದೆ. ಇನ್ನೊಬ್ಬಾತನ ವಿವರ ಕಲೆ ಹಾಕಲಾಗುತ್ತಿದೆ. ಇದೀಗ ನಾಲ್ಕನೇ ಉಗ್ರನ ಮಾಹಿತಿಯನ್ನು ಸೇನೆ ಕಲೆ ಹಾಕಿದ್ದು ಹುಡುಕಾಟ ನಡೆಸುತ್ತಿದೆ.
ಪಹಲ್ಗಾಮ್ ನಲ್ಲಿ ಪ್ರವಾಸಕ್ಕೆಂದು ಬಂದಿದ್ದ ಹಿಂದೂಗಳನ್ನು ಅವರ ಧರ್ಮ ಕೇಳಿ ಈ ನಾಲ್ವರು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದರಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಉಗ್ರರ ಅಡಗುದಾಣಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆ ದಾಳಿ ನಡೆಸಿತ್ತು. ಇದರಿಂದಾಗಿ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ಮೂಡಿತ್ತು. ಇದೀಗ ಕದನ ವಿರಾಮ ಘೋಷಿಸಲಾಗಿದ್ದು ಈ ನಡುವೆ ಭಾರತೀಯ ಸೇನೆ ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಉಗ್ರರನ್ನು ಕೊಂದು ಹಾಕಿದೆ.