ಕಾಶ್ಮಿರ ವಿವಾದ: ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಪಾಕಿಸ್ತಾನ

ಗುರುವಾರ, 6 ಅಕ್ಟೋಬರ್ 2016 (13:15 IST)
ಅಮೆರಿಕ ಇದೀಗ ವಿಶ್ವದ ದೊಡ್ಡ ಶಕ್ತಿಯಾಗಿ ಉಳಿದಿಲ್ಲ. ಆದ್ದರಿಂದ ಕಾಶ್ಮಿರ ಸಮಸ್ಯೆಯನ್ನು ಪರಿಹರಿಸಲು ಚೀನಾ ಮತ್ತು ರಷ್ಯಾದ ಮೊರೆಹೋಗುವುದಾಗಿ ಪ್ರಧಾನಿ ನವಾಜ್ ಷರೀಪ್ ಪ್ರತಿನಿಧಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
 
ಅಮೆರಿಕ ವಿಶ್ವದ ಪ್ರಬಲ ಸಶಕ್ತಶಾಲಿ ರಾಷ್ಟ್ರವಾಗಿ ಉಳಿದಿಲ್ಲ. ಅಮೆರಿಕದ ಪ್ರಭಾವ ದಿನಗಳೆದಂತೆ ಕುಸಿಯುತ್ತಿರುವುದರಿಂದ ಅಮೆರಿಕವನ್ನು ಮರೆಯುವುದೇ ಸೂಕ್ತ ಎಂದು ಪ್ರಧಾನಿ ಷರೀಫ್ ಅವರ ಕಾಶ್ಮಿರದ ವಿಶೇಷ ಪ್ರತಿನಿಧಿ ಮುಶೈದ್ ಹುಸೈನ್ ಸಯೀದ್ ಹೇಳಿಕೆ ನೀಡಿದ್ದಾರೆ.
 
ಕಾಶ್ಮಿರ ಕಣಿವೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎನ್ನುವ ಆರೋಪಗಳ ಬಗ್ಗೆ ಜಾಗತಿಕ ಸಮುದಾಯದ ಗಮನ ಸೆಳೆಯಲು ಸಯೀದ್ ಮತ್ತು ಮತ್ತೊಬ್ಬ ಕಾಶ್ಮಿರ ಪ್ರತಿನಿಧಿ ಶಾಜ್ರಾ ಮನಸಾಬ್ ಅಮೆರಿಕ ಪ್ರವಾಸದಲ್ಲಿದ್ದಾರೆ.  
 
ಒಂದು ವೇಳೆ, ಅಮೆರಿಕ ನಮ್ಮ ಕಾಶ್ಮಿರ ಮತ್ತು ಭಾರತದ ವಿರುದ್ಧದ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ, ಚೀನಾ ಮತ್ತು ರಷ್ಯಾ ದೇಶಗಳ ಮೊರೆಹೋಗುವುದಾಗಿ ಸಯೀದ್ ಬೆದರಿಕೆಯೊಡ್ಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ