ಬೆಂಗಳೂರಿನಲ್ಲಿರುವ ಬಂದರು ಪಾಕಿಸ್ತಾನದಿಂದ ಉಡೀಸ್: ಅಬ್ಬಾ ಪಾಕಿಸ್ತಾನಿಯರ ಬುದ್ಧಿವಂತಿಕೆಯೇ..
ಭಾರತದ ವಿರುದ್ಧ ನಾವು ಯುದ್ಧ ಗೆದ್ದಿದ್ದೇವೆ ಎಂದು ಬೀಗುತ್ತಿರುವ ಪಾಕಿಸ್ತಾನ ಸುಳ್ಳಿನ ಕಂತೆಯನ್ನೇ ಹರಡುತ್ತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪಾಕ್ ಪ್ರಜೆಯೊಬ್ಬ ಪಾಕಿಸ್ತಾನ ಸೇನೆ ಬೆಂಗಳೂರು ಬಂದರನ್ನು ಉಡೀಸ್ ಮಾಡಿದೆ ಎಂದು ಹೇಳಿಕೊಂಡಿದ್ದಾನೆ.
ಆತನ ಟ್ವೀಟ್ ಈಗ ಇನ್ನಿಲ್ಲದಂತೆ ಟ್ರೋಲ್ ಆಗುತ್ತಿದೆ. ಸ್ವತಃ ಭಾರತದ ಐಪಿಎಸ್ ಅಧಿಕಾರಿಯೊಬ್ಬರು ಇದನ್ನು ಟ್ರೋಲ್ ಮಾಡಿದ್ದು, ಬೆಂಗಳೂರಿನಲ್ಲಿ ಪೋರ್ಟ್ (ಬಂದರು) ಇಲ್ಲ ಯುಎಸ್ ಬಿ ಪೋರ್ಟ್ ಮಾತ್ರ ಇರೋದು ಎಂದು ಕಾಲೆಳೆದಿದ್ದಾರೆ.
ಇನ್ನು ಕೆಲವರು ಅಬ್ಬಾ ಪಾಕಿಸ್ತಾನಿಯರ ತಲೆಯೇ ನೊಬೆಲ್ ಪ್ರೈಝ್ ಕೊಡಬೇಕು ಎಂದು ಲೇವಡಿ ಮಾಡಿದ್ದಾರೆ. ಬೆಂಗಳೂರು ಇರೋದು ಭಾರತದ ಕರಾವಳಿಯಲ್ಲಲ್ಲ. ಇಲ್ಲಿಗೆ ಬಂದರು ಇಲ್ಲವೇ ಇಲ್ಲ. ಹಾಗಿದ್ದರೂ ಪಾಕಿಸ್ತಾನ ಸೇನೆ ಉಡೀಸ್ ಮಾಡಿರುವ ಬೆಂಗಳೂರು ಬಂದರು ಯಾವುದೋ ಎಂದು ಹಲವರು ತಮಾಷೆ ಮಾಡಿದ್ದಾರೆ.