ಭಾರತ ರಫೇಲ್ ಜೆಟ್ ಖರೀದಿಸಿದ್ದಕ್ಕೆ ಪಾಕಿಸ್ತಾನಕ್ಕೆ ಹೊಟ್ಟೆ ಉರಿ

ಶುಕ್ರವಾರ, 31 ಜುಲೈ 2020 (09:23 IST)
ನವದೆಹಲಿ: ಭಾರತೀಯ ಸೇನೆಗೆ ಫ್ರಾನ್ಸ್ ನಿರ್ಮಿತ ಸುಧಾರಿತ ರಫೇಲ್ ಯುದ್ಧ ವಿಮಾನ ಸೇರ್ಪಡೆಯಾದ ವಿಚಾರ ಭಾರೀ ಸದ್ದು ಮಾಡಿತ್ತು. ಆದರೆ ಈ ವಿಚಾರ ಕೇಳಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹೊಟ್ಟೆ ಉರಿದುಕೊಂಡಿದೆ.


ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳ ಆಗಮನವಾದ ಸುದ್ದಿಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪಾಕಿಸ್ತಾನ ‘ಭಾರತ ತನ್ನ ಅಗತ್ಯಕ್ಕಿಂತಲೂ ಹೆಚ್ಚು ಮಿಲಿಟರಿ ಸಾಧನಗಳನ್ನು ಖರೀದಿಸುತ್ತಿದೆ’ ಎಂದು ಆಕ್ಷೇಪಿಸಿದ್ದು, ವಿಶ್ವ ನಾಯಕರು ಇದರ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿದೆ.

ಭಾರತ ಈ ಮಟ್ಟಿಗೆ ಶಸ್ತ್ರಾಸ್ತ್ರ ಖರೀದಿಸುತ್ತಿದ್ದರೆ ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಶಸ್ತ್ರಾಸ್ತ್ರ ಸಂಗ್ರಹಣೆಗಾಗಿ ಪೈಪೋಟಿ ಏರ್ಪಡಲಿದೆ. ಇದು ಶಾಂತಿಗೆ ಭಂಗ ಉಂಟು ಮಾಡಲಿದೆ ಎಂದು ಪಾಕ್ ವಿದೇಶಾಂಗ ಇಲಾಖೆ ಹೇಳಿದೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ