ಮಂಜು ಗಡ್ಡೆ ನೋಡಲು ಮುಗಿಬಿದ್ದ ಜನ! ಅಂತಹದ್ದೇನಿತ್ತು ಅಲ್ಲಿ?!

ಶುಕ್ರವಾರ, 21 ಏಪ್ರಿಲ್ 2017 (07:34 IST)
ನವದೆಹಲಿ: ಸಾಮಾನ್ಯವಾಗಿ ನಾವೆಲ್ಲರೂ ಐಸ್ ತುಂಡನ್ನು ನೋಡಿದ್ದೇವೆ. ಆದರೆ ಇಲ್ಲಿ ಮಾತ್ರ ಐಸ್ ಗಟ್ಟಿಯನ್ನು ನೋಡಲು ಜನಸಾಗರವೇ ಹರಿದು ಬಂತು. ಅಷ್ಟಕ್ಕೂ ಅದರಲ್ಲೇನಿತ್ತು ವಿಶೇಷ ಗೊತ್ತಾ?

 
ಇದು ಮಾಮೂಲಿ ಹಿಮಗಡ್ಡೆಯಲ್ಲ! ಕೆನಡಾದ ಸಮುದ್ರ ತೀರವೊಂದರಲ್ಲಿ ಇದ್ದಕ್ಕಿದ್ದಂತೆ ಪರ್ವಾತಾಕಾರದಲ್ಲಿ ತೇಲಿ ಬಂದ ಹಿಮ ಗಡ್ಡೆ. ಸಮುದ್ರದಲ್ಲಿ ಇದು ತೇಲಾಡುತ್ತಿದ್ದರೆ, ನೂರಾರು ಜನ ಅದನ್ನು ನೋಡಿ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಜಾಗತಿಕ ತಾಪಮಾನದ ಬಿಸಿಗೆ ಮಂಜುಗಡ್ಡೆ ಕರಗಿ ಸಮುದ್ರ ಸೇರುವುದು ಇಲ್ಲಿನ ಜನರಿಗೆ ಹೊಸದೇನಲ್ಲ. ಆದರೆ ಈ ಬಾರಿ ಬಂದ ಪರ್ವತಾಕಾರದ ಬೃಹತ್ ಮಂಜುಗಡ್ಡೆ ಜನರ ಗಮನ ಸೆಳೆಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ