Covid 19: ವಿಡಿಯೋದ ಕೊನೆಯಲ್ಲಿ, ಹಲವಾರು ಬಾಗಿಲುಗಳನ್ನು ಸೀಲ್ ಮಾಡುವುದನ್ನು ಮತ್ತು ರೆಕಾರ್ಡಿಂಗ್ ಅನ್ನು ನಿವಾಸಿಗಳಿಗೆ ಪ್ರಸಾರ ಮಾಡುವುದನ್ನು ತೋರಿಸುತ್ತದೆ. "ಜನರು ಹೊರಗೆ ಹೋಗಬಾರದು. ಅವರು ಸಿಕ್ಕಿದ ತಕ್ಷಣ, ಅವರ ಬಾಗಿಲುಗಳನ್ನು ಸೀಲ್ ಮಾಡಲಾಗುವುದು'' ಎಂದು ಘೋಷಿಸಲಾಗಿದೆ.
ಕೋವಿಡ್ -19 ಡೆಲ್ಟಾ (Covid 19) ರೂಪಾಂತರ ಪ್ರಕರಣಗಳು ಚೀನಾದಲ್ಲಿ ಹೆಚ್ಚಾಗುತ್ತಿದೆ. ಇದರ ವಿರುದ್ಧ ಅಲ್ಲಿನ ಅಧಿಕಾರಿಗಳು ತಮ್ಮ ಮನೆಗಳ ಒಳಗೆ ನಿವಾಸಿಗಳನ್ನು ಲಾಕ್ ಮಾಡುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಸಾಂಕ್ರಾಮಿಕ ರೋಗದ ಆರಂಭದಲ್ಲಿ ಚೀನಾದ ವುಹಾನ್ನಲ್ಲಿ ಕಂಡುಬಂದ ತೀವ್ರ ತಂತ್ರಗಳ ಪುನರಾವರ್ತನೆಯಾಗಿದೆ ಎಂದು ತೈವಾನ್ ನ್ಯೂಸ್ನಲ್ಲಿ ಕೆಲಸ ಮಾಡುತ್ತಿರುವ ಕಿಯೋನಿ ಎವರಿಂಗ್ಟನ್ ಹೇಳಿದ್ದಾರೆ. ಪಿಪಿಇ ಕಿಟ್ ಧರಿಸಿರುವ ಸಿಬ್ಬಂದಿ ಜನರ ಮನೆಗಳ ಬಾಗಿಲಿನ ಮೇಲೆ ಕಬ್ಬಿಣದ ಸರಳುಗಳನ್ನು ಇರಿಸುವ ಮತ್ತು ಯಾರನ್ನೂ ಹೊರಗೆ ಬಿಡದಂತೆ ಅವುಗಳನ್ನು ಸುತ್ತಿಗೆ ಹಾಕುವಿಕೆಯನ್ನು ತೋರಿಸುವಂತೆ ಅನೇಕ ವಿಡಿಯೋಗಳು ವೈರಲ್ ಆಗಿದೆ. ಒಂದು ಟ್ವಿಟ್ಟರ್ ಪೋಸ್ಟ್ನಲ್ಲಿ, ಒಬ್ಬ ವ್ಯಕ್ತಿಯು ತನ್ನ ಕ್ಯಾರೆಂಟೈನ್ ಅನ್ನು ಉಲ್ಲಂಘಿಸಿದ ಆರೋಪದಲ್ಲಿ ಸಿಕ್ಕಿಬಿದ್ದಂತೆ ಕಂಡುಬರುತ್ತದೆ.
ಆತ ಹೊರಗಿನ ಗಾಳಿ ಕುಡಿಯಲೆಂದು ತನ್ನ 104 ನಂಬರಿನ ಅಪಾರ್ಟ್ಮೆಂಟ್ನಿಂದ ಹೊರಗೆ ಹೋಗಿದ್ದು, ಫ್ಲ್ಯಾಟ್ಗೆ ವಾಪಸಾಗುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಅಲ್ಲದೆ, ಒಂದೇ ದಿನದಲ್ಲಿ 3 ಕ್ಕೂ ಹೆಚ್ಚು ಬಾರಿ ಬಾಗಿಲು ತೆರೆದರೆ, ಅಂತಹವರ ಮನೆಯನ್ನು ಅಧಿಕಾರಿಗಳು ಲಾಕ್ ಮಾಡುತ್ತಾರೆ ಎಂದು ಯೂಟ್ಯೂಬ್ ಚಾನೆಲ್ವೊಂದರ ಎಡಿಟರ್ ಹೇಳಿಕೊಂಡಿದ್ದಾರೆ. ಪೂರ್ಣ ಪಿಪಿಇ ಧರಿಸಿರುವ ಜನರು ದೊಡ್ಡ ಲೋಹದ ಪಟ್ಟಿಗಳನ್ನು ಬಾಗಿಲಿನ ಮೇಲೆ ಎಕ್ಸ್ ಮಾದರಿಯಲ್ಲಿ ಸುತ್ತುವುದನ್ನು ಕಾಣಬಹುದು ಎಂದು ತೈವಾನ್ ನ್ಯೂಸ್ ವರದಿ ಮಾಡಿದೆ.