ದೇಹವನ್ನೇ ತಿಂದ ಸಾಕು ಬೆಕ್ಕುಗಳು!?

ಶುಕ್ರವಾರ, 24 ಜೂನ್ 2022 (14:04 IST)
ಮಾಸ್ಕೋ : ಮೃತ ಮಹಿಳೆಯ ದೇಹವನ್ನು ಆಕೆ ಸಾಕಿದ್ದ 20 ಬೆಕ್ಕುಗಳೇ ತಿಂದ ಆಘಾತಕಾರಿ ಘಟನೆ ರಷ್ಯಾದ ಬಟಾಯ್ಸ್ಕ್ನ ನಿವಾಸವೊಂದರಲ್ಲಿ ನಡೆದಿದೆ.

ರಷ್ಯಾದ ಬಟಾಯ್ಸ್ಕ್ನಲ್ಲಿ ಮಹಿಳೆಯೊಬ್ಬಳಿಗೆ ಬೆಕ್ಕುಗಳನ್ನು ಸಾಕುವುದೆಂದರೆ ಬಹಳ ಪ್ರೀತಿಯಾಗಿತ್ತು. ಇದರಿಂದಾಗಿ ತನ್ನ ನಿವಾಸದಲ್ಲಿ 20 ಬೆಕ್ಕುಗಳನ್ನು ಹೊಂದಿದ್ದರು. ಆದರೆ ಮಹಿಳೆ ಸುಮಾರು 2 ವಾರಗಳ ಹಿಂದೆ ಮೃತಪಟ್ಟಿದ್ದಳು.

ಇದರಿಂದಾಗಿ ಆ ಬೆಕ್ಕುಗಳಿಗೆ ತಿನ್ನಲು ಆಹಾರವಿಲ್ಲದಿದ್ದರಿಂದ ಆ ಮಹಿಳೆಯ ದೇಹವನ್ನೇ ತಿಂದಿದ್ದಾರೆ. ತುಂಬಾ ದಿನಗಳಿಂದ ಮಹಿಳೆ ಕಾಣಿಸದಿದ್ದರಿಂದ ಆಕೆಯ ಸಹೋದ್ಯೋಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಕೊಂಡ ಪೊಲೀಸರಿಗೆ ಎರಡು ವಾರಗಳಾದರೂ ಮಹಿಳೆಯನ್ನು ಪತ್ತೆ ಹಚ್ಚಲಾಗಲಿಲ್ಲ. ಕೊನೆಗೆ ಮಹಿಳೆಯ ಮನೆಯನ್ನು ಶೋಧಿಸಿದಾಗ ಅಲ್ಲಿದ್ದ ಅವಶೇಷಗಳನ್ನು ನೋಡಿ ಶಾಕ್ ಆಗಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ