ರಷ್ಯಾದಲ್ಲಿ ಭಾರತೀಯರ ಪ್ರೀತಿಗೆ ಪ್ರಧಾನಿ ಮೋದಿ ಧನ್ಯವಾದ

Sampriya

ಸೋಮವಾರ, 8 ಜುಲೈ 2024 (19:43 IST)
Photo Courtesy X
ಮಾಸ್ಕೋ: ರಷ್ಯಾದಲ್ಲಿ ಭಾರತೀಯರು ನೀಡಿದ ಅದ್ಧೂರಿಗೆ ಸ್ವಾಗತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮನಸೋತು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ರಷ್ಯಾಗೆ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯರು ಅದ್ಧೂರಿ ಸ್ವಾಗತ ನೀಡಿದ್ದರು. ಹೊಟೇಲ್‌ನಲ್ಲಿ ಮೋದಿ ಅವರನ್ನು  ಸ್ವಾಗತಿಸಲು ಭಾರತೀಯ ಸಮುದಾಯದವರು ಜಮಾಯಿಸಿದ್ದು, ಈ ವೇಳೆ ಮೋದಿ ಅವರಿಗೆ ಭಾರತದ ಭಾವುಟ ಪ್ರದರ್ಶಿಸಿ ಸ್ವಾಗತಿಸಿದರು.  ಮೋದಿ ಅವರಿಗೆ ಶೇಕ್ ಹ್ಯಾಂಡ್ ನೀಡಿ, ಕೈ ಬೀಸಿದರು.    

ಮೋದಿ ಅವರು 22 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ತೆರಳಿದ್ದು ಎರಡು ದಿನಗಳ ರಷ್ಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.

ಇನ್ನೂ ರಷ್ಯಾದಲ್ಲಿರುವ ಭಾರತೀಯರ ಪ್ರೀತಿಗೆ ಮನಸೋತ ಮೋದಿ ಅವರು, ತಮ್ಮ ಎಕ್ಸ್‌ನಲ್ಲಿ ಫೋಟೋ ಹಂಚಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಮೋದಿ ಪೋಸ್ಟ್‌ನಲ್ಲಿ ಹೀಗಿದೆ:  ಮಾಸ್ಕೋದಲ್ಲಿ ಸ್ಮರಣೀಯ ಸ್ವಾಗತ! ಭಾರತೀಯ ಸಮುದಾಯದ ಪ್ರೀತಿಗೆ ನಾನು ಧನ್ಯವಾದ ಹೇಳುತ್ತೇನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ