ಲಾರಿ ಕಂಟೇನರ್ ನಲ್ಲಿದ್ದ ಮೃತದೇಹವನ್ನು ಕಂಡು ಹೌಹಾರಿದ ಪೊಲೀಸರು

ಗುರುವಾರ, 24 ಅಕ್ಟೋಬರ್ 2019 (09:02 IST)
ಲಂಡನ್ : ಗ್ರೈಸ್ ಈಸ್ಟರ್ನ್ ಅವೆನ್ಯೂ ಬಳಿ ವಾಟರ್ ಗ್ಲೇಡ್ ಇಂಡಸ್ಟ್ರಿಯಲ್ ಪಾರ್ಕ್ ಬಳಿ ನಿಂತಿದ್ದ ಲಾರಿ ಕಂಟೇನರ್ ನಲ್ಲಿ 39 ವ್ಯಕ್ತಿಗಳ ಮೃತದೇಹ ಪತ್ತೆಯಾಗಿದೆ.



ಲಾರಿಯಲ್ಲಿ ಮೃತದೇಹವಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಲಾರಿಯನ್ನು ಪರಿಶೀಲನೆ ನಡೆಸಿದಾಗ 39 ಮೃತದೇಹಗಳು ಪತ್ತೆಯಾಗಿವೆ. ಆದರೆ ಮೃತದೇಹಗಳ ಗುರುತು ಇನ್ನು ಪತ್ತೆಯಾಗಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಐರ್ಲೆಂಡ್ ನ 25 ವರ್ಷದ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

 

ಈಗಾಗಲೇ ತನಿಖೆ ಪ್ರಾರಂಭಿಸಿದ ಪೊಲೀಸರು ಈ ಲಾರಿ ಬಲ್ಗೇರಿಯಾದಿಂದ ಬಂದಿದ್ದು, ಮಾನವ ಕಳ್ಳಸಾಗಾಣಿಕೆ ಮಾಡುತ್ತಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ