ಇಬ್ಬರು ಶ್ರೀಮಂತ ಇಟಾಲಿಯನ್ ವಿದ್ಯಾರ್ಥಿಗಳು ನೈಟ್ ಕ್ಲಬ್ ಗೆ ಹೋಗಿದ್ದಾಗ, ಅಲ್ಲಿ ಮಹಿಳೆಯೊಬ್ಬಳ ಪರಿಚಯವಾಗಿದೆ. ಆಕೆ ಮತ್ತಿನಲ್ಲಿರುವುದನ್ನು ನೋಡಿದ ವಿದ್ಯಾರ್ಥಿಗಳು ಆಕೆಯನ್ನು ನೈಟ್ ಕ್ಲಬ್ ನ ಮೆಂಟೇನನ್ಸ್ ರೂಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಬಳಿಕ ತಾವು ಮಾಡಿದ ಘನಕಾರ್ಯಕ್ಕೆ ಒಬ್ಬರನೊಬ್ಬರು ಅಪ್ಪಿಕೊಂಡು ನಕ್ಕಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕೇಸು ದಾಖಲಾಗಿದ್ದು, ಕೋರ್ಟ್ ನಲ್ಲಿ ವಿದ್ಯಾರ್ಥಿಗಳು ಮಹಿಳೆಯ ಒಪ್ಪಿಗೆಯ ಮೇರೆಗೆ ಸಂಬಂಧ ಬೆಳಸಿರುವುದಾಗಿ ಹೇಳಿದ್ದಾರೆ. ಆದರೆ ಮಹಿಳೆ ಮತ್ತಿನಲ್ಲಿದ್ದ ಕಾರಣ ಆಕೆಯ ಒಪ್ಪಿಗೆಯಮೇರೆಗೆ ನಡೆದಿಲ್ಲವೆಂದು ತಿರ್ಮಾನಿಸಿ ಕೋರ್ಟ್ ವಿದ್ಯಾರ್ಥಿಗಳನ್ನು ದೋಷಿಗಳೆಂದು ಹೇಳಿದೆ.