ಟೋಕಿಯೋ ಸರ್ಕಾರದಿಂದ ಜನರಿಗೆ ಆಫರ್?

ಭಾನುವಾರ, 8 ಜನವರಿ 2023 (11:33 IST)
ಟೋಕಿಯೋ : ರಾಜಧಾನಿ ಟೋಕಿಯೋ ನಗರದಲ್ಲಿ ಜನಸಂಖ್ಯೆ ಒತ್ತಡವನ್ನ ಕಡಿಮೆ ಮಾಡಲು ಜಪಾನ್ ಸರ್ಕಾರ ಲಕ್ಷಗಟ್ಟಲೇ ಹಣ ನೀಡುವ ಯೋಜನೆ ಪ್ರಕಟಿಸಿದೆ.
 
ಟೋಕಿಯೋದಿಂದ ಯಾರು ಹೊರ ಹೋಗ್ತಾರೋ ಅಂತಹ ಕುಟುಂಬಗಳ ಪ್ರತಿಯೊಂದು ಮಗುವಿಗೆ 10 ಲಕ್ಷ ಯೆನ್ ಅಂದ್ರೆ ಅಂದಾಜು 6.26 ಲಕ್ಷ ರೂಪಾಯಿ ಹಣ ನೀಡುವುದಾಗಿ ಅಲ್ಲಿನ ಸರ್ಕಾರ ಆಫರ್ ನೀಡಿದೆ.

ಕಳೆದ ವರ್ಷ ಮೊದಲಬಾರಿಗೆ ಜಪಾನ್ನಲ್ಲಿ ಜನಸಂಖ್ಯಾ ಕುಸಿತ ವರದಿಯಾಗಿದ್ದು, ಕೊರೊನಾ ಕಾರಣದಿಂದಾಗಿಯೇ ಜನಸಂಖ್ಯೆ ಕುಸಿದಿರುವುದಾಗಿ ಜನಸಂಖ್ಯಾ ನೀತಿ ನಿರೂಪಕರು ಹೇಳಿದ್ದಾರೆ.

ಅದರಲ್ಲೂ ದೇಶದ ಗ್ರಾಮೀಣ ಭಾಗಗಳಲ್ಲಿ ಜನಸಂಖ್ಯಾ ಸಾಂದ್ರತೆ ಕಡಿಮೆಯಾಗಿದ್ದು, ಸೌಲಭ್ಯಗಳು ಉತ್ತಮವಾಗಿರುವ ನಗರ ಪ್ರದೇಶಗಳತ್ತ ಜನರು ವಲಸೆ ಹೋಗಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ