ವಾಷಿಂಗ್ಟನ್ : 2016ರ ಚುನಾವಣಾ ಪ್ರಚಾರದ ವೇಳೆ ನೀಲಿಚಿತ್ರ ತಾರೆಗೆ ಡೊನಾಲ್ಡ್ ಟ್ರಂಪ್ ಹಣ ನೀಡಿರುವ ಕುರಿತು ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಗುರುವಾರ ದೋಷಾರೋಪಣೆ ಮಾಡಿದೆ. ಇದೀಗ ಟ್ರಂಪ್ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಮೊದಲ ಅಮೆರಿಕದ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ.
ತಮ್ಮ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿರುವ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿಯ ತೀರ್ಪನ್ನು ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರದ ತಂತ್ರದ ಭಾಗವಾಗಿ ಬಳಸುತ್ತಿದೆ. ಅಲ್ಲದೇ ಈಗಿನ ಅಧ್ಯಕ್ಷ ಜೋ ಬೈಡನ್ ಈ ತಪ್ಪಿಗಾಗಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವರದಿಗಳ ಪ್ರಕಾರ ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬುದು ತಿಳಿದುಬಂದಿದೆ.