17 ಭಾರತೀಯರ ಬಿಡುಗಡೆಗೆ ಇರಾನ್‌ನಿಂದ ಸಕಾರಾತ್ಮಕ ಸ್ಪಂದನೆ: ಜೈ ಶಂಕರ್
ಭಾರತದ ಆತಂಕ ಅರ್ಥವಾಗುತ್ತದೆ ಎಂದು ಇರಾನ್ ವಿದೇಶಾಂಗ ಸಚಿವರು ನನಗೆ ಹೇಳಿದರು. ಹೀಗಾಗಿ ಬಿಡುಗಡೆ ವಿಶ್ವಾಸವಿದೆ. ಭಾರತದ ಒಳಗೂ, ಹೊರಗೂ ಪ್ರತಿಯೊಬ್ಬ ಭಾರತೀಯನ ರಕ್ಷಣೆ ಮೋದಿಯವರ ಗ್ಯಾರಂಟಿ ಎಂದೂ ಜೈ ಶಂಕರ್ ಹೇಳಿದರು.
ಮಧ್ಯ ಪ್ರಾಚ್ಯ ಭಾಗದಲ್ಲಿ 90 ಲಕ್ಷ ಭಾರತೀಯರು ವಾಸವಿದ್ದಾರೆ. ಅವರ ರಕ್ಷಣೆಯೇ ನಮ್ಮ ಬದ್ಧತೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳ ಸಂಪರ್ಕದಲ್ಲಿ ಇದ್ದೇವೆ. ಸಂಘರ್ಷ ಬಿಟ್ಟು ಮಾತುಕತೆಗೆ ಸಲಹೆ ನೀಡಿದ್ದೇವೆ ಎಂದು ಜೈಶಂಕರ್ ತಿಳಿಸಿದರು.