ಮಾಲ್ಡೀವ್ಸ್: ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಭಾರತದ ಬಗ್ಗೆ, ಪ್ರಧಾನಿ ಮೋದಿ ಬಗ್ಗೆ ಅವಹೇಳನ ಮಾಡಿದ್ದ ಮಾಲ್ಡೀವ್ಸ್ ಸಚಿವೆ ಮರಿಯಂ ಶಿಯೂನ ಈಗ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ.
ಮರಿಯಂ ಸೋಷಿಯಲ್ ಮೀಡಿಯಾದಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುವಂತಹ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಈ ಹಿಂದೆ ಭಾರತದ ಬಗ್ಗೆ ಅವಹೇಳನ ಮಾಡಿದ್ದರಿಂದ ಉಭಯ ದೇಶಗಳ ನಡುವಿನ ಸಂಬಂಧವೇ ಹಳಸಿಹೋಗಿತ್ತು.
ಇದೀಗ ಮತ್ತೆ ಭಾರತದ ತ್ರಿವರ್ಣ ಧ್ವಜ ಅವಹೇಳನ ಮಾಡಿದ ಪೋಸ್ಟ್ ಶೇರ್ ಮಾಡಿದ್ದಕ್ಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಮ್ಮ ಪೋಸ್ಟ್ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೇ ಸೋಷಿಯಲ್ ಮೀಡಿಯಾದಿಂದ ಪೋಸ್ಟ್ ಡಿಲೀಟ್ ಮಾಡಿದ್ದಲ್ಲದೆ, ತಮ್ಮಿಂದಾಗಿ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಕ್ಷಮೆ ಕೇಳಿದ್ದಾರೆ.
ನಾನು ಬಳಸಿದ ಚಿತ್ರ ಭಾರತೀಯ ಧ್ವಜವನ್ನು ಹೋಲುತ್ತದೆ ಎಂದು ನಂತರ ನನಗೆ ತಿಳಿಯಿತು. ಇದು ಉದ್ದೇಶಪೂರ್ವಕವಾಗಿ ನಡೆದಿದ್ದಲ್ಲ. ಹೀಗಾಗಿ ಕ್ಷಮೆ ಕೋರುತ್ತಿದ್ದೇನೆ ಎಂದಿದ್ದಾರೆ.