ಕೊರೊನಾ ಸೋಂಕಿಗೆ ಒಳಗಾದ ಬ್ರಿಟನ್ ನ ರಾಜಕುಮಾರ ಚಾರ್ಲ್ಸ್

ಗುರುವಾರ, 26 ಮಾರ್ಚ್ 2020 (11:18 IST)
ಲಂಡನ್ : ಬ್ರಿಟನ್ ನ ರಾಜಕುಮಾರ, ರಾಣಿ ಎಲಿಜಬೆತ್ 2 ಹಿರಿಯ ಮಗ  ಚಾರ್ಲ್ಸ್ ಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿರುವುದಾಗಿ ತಿಳಿದುಬಂದಿದೆ.


ರಾಜಕುಮಾರ ಚಾರ್ಲ್ಸ್ ಗೆ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬುಧವಾರ ಬಂದ ವರದಿಯಲ್ಲಿ ಅವರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಅವರ ಕಚೇರಿ ಖಚಿತಪಡಿಸಿದೆ.


ಹಾಗೇ ಚಾರ್ಲ್ಸ್ ಪತ್ನಿ ಕ್ಯಾಮಿಲಾರಿಗೆ ಕೊರೊನಾ ಪರೀಕ್ಷೆ ಮಾಡಿದ್ದು ಅವರಿಗೆ ನೆಗೆಟಿವ್ ಬಂದಿದೆ. ಈ ದಂಪತಿ ಸ್ಕಾಟ್ಲೆಂಟ್ ನಲ್ಲಿ ಸ್ವಯಂ ದಿಗ್ಭಂಧನದಲ್ಲಿ ಇದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ