ಮಿಶೆಲ್ ಒಬಾಮಾರನ್ನು ಹೊಗಳಿದ ಪ್ರಿಯಾಂಕಾ ಚೋಪ್ರಾ: ಯಾಕೆ ಗೊತ್ತಾ?

ಶುಕ್ರವಾರ, 14 ಅಕ್ಟೋಬರ್ 2016 (16:52 IST)
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಪತ್ನಿ ಮಿಶೆಲ್ ಒಬಾಮಾ ಅವರ ಭಾಷಣವನ್ನು ಹೊಗಳಿ ಬಾಲಿವುಡ್ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದಾರೆ.
 
ನ್ಯೂಹಾಂಪ್‌‌ಶೈರ್ ನಗರದಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾದ ಹಿಲೆರಿ ಕ್ಲಿಂಟನ್ ಪರವಾಗಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಿಶೈಲ್ ಒಬಾಮಾ ಮಾಡಿದ ಭಾಷಣ ಸ್ಪೂರ್ತಿದಾಯಕವಾಗಿತ್ತು ಎಂದು ಚೋಪ್ರಾ ಟ್ವೀಟ್ ಮಾಡಿದ್ದಾರೆ.
 
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾದ ಡೊನಾಲ್ಡ್ ಟ್ರಂಪ್‌ಗೆ ಮಹಿಳೆಯರ ಬಗ್ಗೆ ಗೌರವವಿಲ್ಲ. ಇದೊಂದು ಸಾಮಾನ್ಯ ಸಂಗತಿಯಲ್ಲವಾಗಿದ್ದರಿಂದ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಮಿಶೆಲ್ ಒಬಾಮಾ ಗುಡುಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ