ಪಾಕಿಸ್ತಾನದಲ್ಲಿ ಭುಗಿಲೆದ್ದ ಪ್ರತಿಭಟನೆ !

ಶನಿವಾರ, 23 ಜುಲೈ 2022 (09:44 IST)
ಇಸ್ಲಾಮಾಬಾದ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಹಮ್ಜಾ ಶಹಬಾಜ್ ಅವರ ಆಯ್ಕೆಯನ್ನು ಖಂಡಿಸಿ ಪ್ರತಿಭಟನೆ ಭುಗಿಲೆದ್ದಿದೆ.

ಈ ಬೆನ್ನಲ್ಲೇ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಪರ್ವೇಜ್ ಇಲಾಹಿ ವಿರುದ್ಧ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ನಾಯಕ ಹಮ್ಜಾ ಶಹಬಾಜ್ ಅವರು ಪಂಜಾಬ್ನ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾಗಿದ್ದಾರೆ.

ಪಾಕಿಸ್ತಾನ ಮುಸ್ಲಿಂ ಲೀಗ್-ಕ್ವಾಡ್ ಮತಗಳನ್ನು ಪಂಜಾಬ್ ವಿಧಾನಸಭೆ ಉಪ ಸಭಾಪತಿ ತಿರಸ್ಕರಿಸಿದ ಬಳಿಕ ಅವರು ಜಯ ಸಾಧಿಸಿದ್ದಾರೆ. 

ಪಿಟಿಐ ಮತ್ತು ಪಿಎಂಎಲ್-ಕ್ಯೂ ಜಂಟಿ ಅಭ್ಯರ್ಥಿ ಪರ್ವೈಜ್ ಇಲಾಹಿ 186 ಮತಗಳನ್ನು ಪಡೆದರೆ, ಹಮ್ಜಾ ಶಹಬಾಜ್ 179 ಮತಗಳನ್ನು ಪಡೆದಿದ್ದರು. ಆದರೆ ಪಿಎಂಎಲ್-ಕ್ಯೂನ 10 ಮತಗಳನ್ನು ಡೆಪ್ಯುಟಿ ಸ್ಪೀಕರ್ ದೋಸ್ತ್ ಮುಹಮ್ಮದ್ ಮಜಾರಿ ಅವರು ತಿರಸ್ಕರಿಸಿದ್ದರಿಂದಾಗಿ ಪರ್ವೈಜ್ ಇಲಾಹಿ ಅವರು 176 ಮತಗಳನ್ನು ತೆಗೆದುಕೊಂಡರು. ಇದರಿಂದಾಗಿ ಇಲಾಹಿಗೆ ಸೋಲುಂಟಾಯಿತು.

ಸಿಎಂ ಆಗಿ ಮರು ಆಯ್ಕೆಯಾದ ಬಳಿಕ ಮಾತನಾಡಿದ ಹಮ್ಜಾ ಶಹಬಾಜ್, `ಕೆಲವರು ಆಯ್ಕೆ ವಿರುದ್ಧ ಈಗ ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ. ಆದರೆ ಸಂಸತ್ತಿಗೆ ನೈತಿಕತೆಯ ಅಧಿಕಾರವಿದೆ. ಪ್ರಜಾಪ್ರಭುತ್ವವು ನೈತಿಕತೆಯ ಮೇಲೆ ಆಧಾರಿತವಾಗಿದೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ