ರಷ್ಯಾ : ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ದಿಢೀರ್ ದೌಡಾಯಿಸಿದ್ದು, ಭಾರೀ ಕುತೂಹಲ ಕೆರಳಿಸಿದೆ.
ಉಕ್ರೇನ್ ಸಂಘರ್ಷದ ನಡುವಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಮಯಾವಕಾಶ ಮಾಡಿಕೊಂಡು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ತುರ್ತು ಮಾತುಕತೆ ನಡೆಸಿದ್ದಾರೆ.
ರಷ್ಯಾ ರಾಜಧಾನಿ ಮಾಸ್ಕೋದ ಕ್ರೆಮ್ಲಿನ್ನಲ್ಲಿ ಉಭಯ ನಾಯಕರು ಮಹತ್ವದ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ವಿವರಗಳನ್ನು ಉಭಯ ನಾಯಕರು ಇನ್ನೂ ಬಹಿರಂಗಪಡಿಸಿಲ್ಲ.
ಆದ್ರೆ, ರಷ್ಯಾ ರಾಜಧಾನಿ ಮಾಸ್ಕೋಗೆ ಬಂದಿಳಿದ ವೇಳೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತುಂಬಾನೇ ಉತ್ಸಾಹಭರಿತರಾಗಿದ್ದರು. ಸಂಘರ್ಷದ ಈ ಸನ್ನಿವೇಶದಲ್ಲಿ ನನಗೆ ಬುಲಾವ್ ಬಂದಿರೋದು ಉತ್ಸಾಹದಾಯಕವಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯೆ ನೀಡುವ ವಿಡಿಯೋವನ್ನು ಪಾಕಿಸ್ತಾನದ ಜಿಯೋ ನ್ಯೂಸ್ ವರದಿಗಾರ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು.
ರಷ್ಯಾಗೆ 2 ದಿನಗಳ ಭೇಟಿಗಾಗಿ ಬಂದಿಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ರಷ್ಯಾದ ವಿದೇಶಾಂಗ ಇಲಾಖೆ ಉನ್ನತ ಅಧಿಕಾರಿಗಳು ಬರಮಾಡಿಕೊಂಡರು. ಇಮ್ರಾನ್ ಖಾನ್ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಪುಟಿನ್ ಜೊತೆಗೆ ತುರ್ತು ಮಾತುಕತೆ ನಡೆದಿದೆ.