ಯುದ್ಧ ಭೀತಿ : ಸುತ್ತುವರಿದ ರಷ್ಯಾ ಸೇನೆ

ಗುರುವಾರ, 24 ಫೆಬ್ರವರಿ 2022 (07:52 IST)
ಮಾಸ್ಕೋ : ರಷ್ಯಾ-ಉಕ್ರೇನ್ ನಡುವೆ ಯುದ್ಧದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಖಾಸಗಿ ಸಂಸ್ಥೆ ಬಿಡುಗಡೆ ಮಾಡಿರುವ ಉಪಗ್ರಹದ ಚಿತ್ರಗಳಲ್ಲಿ ರಷ್ಯಾ ಸೇನೆ ಸಂಪೂರ್ಣವಾಗಿ ಉಕ್ರೇನ್ನನ್ನು ಸುತ್ತುವರಿದಿದೆ.

ರಷ್ಯಾ ಸೇನೆ ಅಗತ್ಯ ವಸ್ತುಗಳನ್ನು ರವಾನಿಸುತ್ತಿರೋದು ಗೊತ್ತಾಗಿದೆ. ದಕ್ಷಿಣ ಬೆಲಾರಸ್ನ ಮೊಜ್ಯೂರ್ ಏರ್ಫೀಲ್ಡ್ ಬಳಿ 100 ವಾಹನಗಳು ನಿಂತಿದ್ದು ಗುಡಾರಗಳನ್ನು ಹಾಕಿರೋದು ಕಂಡು ಬಂದಿದೆ.

ಇಲ್ಲಿಂದ ಉಕ್ರೇನ್ ವಿಮಾನನಿಲ್ದಾಣ ಕೇವಲ 40 ಕಿ.ಮೀ ದೂರದಲ್ಲಿದೆ. ಅಷ್ಟೇ ಅಲ್ಲದೆ ಬೆಲ್ಗ್ರೋಡ್ನ ಮಿಲಿಟರಿ ಗ್ಯಾರಿಸನ್ನಲ್ಲಿ ಹೊಸ ಆಸ್ಪತ್ರೆಯನ್ನೂ ನಿರ್ಮಿಸಲಾಗಿದೆ. ಇದರ ಜೊತೆಗೆ ಉಕ್ರೇನ್ನಿಂದ 20 ಕಿ.ಮೀ ದೂರದಲ್ಲಿ ಯುದ್ದೋಪಕರಣಗಳ ಜೊತೆಗೆ ಸೇನಾಪಡೆಯನ್ನೂ ನಿಯೋಜಿಸಲಾಗಿದೆ. 

ಉತ್ತರ ಉಕ್ರೇನ್ನ 40 ಕಿ.ಮೀ. ದೂರದಲ್ಲಿ ಯುದ್ಧವಾಹನಗಳು, ಟ್ಯಾಂಕ್ಗಳು, ಫಿರಂಗಿಗಳು, ಭಾರೀ ಸಾಮಾಗ್ರಿಗಳನ್ನು ರಷ್ಯಾ ಸೇನೆ ರವಾನಿಸಿದೆ. ಪಶ್ಚಿಮ ರಷ್ಯಾದ ಪೊಚೆಪ್ ಬಳಿ ಹೆಚ್ಚುವರಿ ಸೇನೆ ನಿಯೋಜಿಸಲು ದೊಡ್ಡ ಪ್ರದೇಶವನ್ನು ತೆರವುಗೊಳಿಸಲಾಗ್ತಿದೆ. ಇನ್ನು, ರಷ್ಯಾ ವರ್ತನೆಗೆ ಯುರೋಪ್ನ ಹಲವು ದೇಶಗಳು ಕೆಂಡಾಮಂಡಲವಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ