ಯುದ್ಧ ಬೇಡ ಎಂಬುದನ್ನು ಪುಟಿನ್ಗೆ ಅರ್ಥ ಮಾಡಿಸಿ: ಕುಲೆಬಾ

ಸೋಮವಾರ, 7 ಮಾರ್ಚ್ 2022 (10:04 IST)
ಕೀವ್ : ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ 11ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧ ಸಾಕು ಎಂದು ವಿಶ್ವದ ಹಲವು ರಾಷ್ಟ್ರಗಳು ಒತ್ತಾಯಿಸುತ್ತಿವೆ.

ಇದೀಗ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಕೂಡ ಯುದ್ಧ ಬೇಡ ಎಂಬುದನ್ನು ರಷ್ಯಾ ಅಧ್ಯಕ್ಷ ಪುಟಿನ್ ಗೆ ಅರ್ಥ ಮಾಡಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ಯುದ್ಧ ನಿಲ್ಲಿಸುವುದು ಪುಟಿನ್ ಕೈಯಲ್ಲಿಯೇ ಇದೆ. ಈ ಮಧ್ಯೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ.

 
ಇದೇ ವೇಳೆ ರಷ್ಯಾ ಅಧ್ಯಕ್ಷನೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತ, ಚೀನಾ, ನೈಜೀರಿಯಾ ಸೇರಿ ಇನ್ನಿತರ ರಾಷ್ಟ್ರಗಳಿಗೆ ಯುದ್ಧ ನಿಲ್ಲಿಸಲು ಸಹಾಯ ಮಾಡುವಂತೆಯೂ ಕೇಳಿಕೊಂಡಿದ್ದಾರೆ. ರಷ್ಯಾ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸಿ.

ಆ ದೇಶ ಯುದ್ಧದ ನಿಯಮ ಉಲ್ಲಂಘಿಸುತ್ತಿದೆ. ಈಗ ಕದನ ವಿರಾಮವನ್ನೂ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಉಕ್ರೇನ್ನಲ್ಲಿರುವ ಇತರ ದೇಶಗಳ ನಾಗರಿಕರು ಹಾಗೂ ನಮ್ಮ ನಾಗರಿಕರನ್ನು ಇಲ್ಲಿಂದ ಸ್ಥಳಾಂತರಿಸಲು ಅವಕಾಶ ಕೊಡಿ ಎಂದು ಕುಲೆಬಾ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ