ಭಾರತ, ಪಾಕ್ ದ್ವಿಪಕ್ಷೀಯವಾಗಿ ಕಾಶ್ಮಿರ ಸಮಸ್ಯೆ ಇತ್ಯರ್ಥಗೊಳಿಸಲಿ: ಚೀನಾ

ಶುಕ್ರವಾರ, 22 ಸೆಪ್ಟಂಬರ್ 2017 (19:28 IST)
ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಮಾತುಕತೆಗಳ ಮೂಲಕ ಪರಿಹರಿಸಕೊಳ್ಳಬೇಕು ಎಂದು ಚೀನಾ ಉಭಯ ರಾಷ್ಟ್ರಗಳಿಗೆ ಸಲಹೆ ನೀಡಿದೆ. 
ಕಾಶ್ಮೀರದ ಬಗ್ಗೆ ಯುಎನ್ ನಿರ್ಣಯವನ್ನು ಜಾರಿಗೆ ತರಲು ಒಐಸಿ ಕೇಳಿದಾಗ, ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್. ಈ ವಿಷಯವನ್ನು ಭಾರತ ಮತ್ತು ಪಾಕಿಸ್ತಾನ ನಡುವೆ ಪರಿಹರಿಸಬೇಕು ಎಂದು ಹೇಳಿದರು.
 
ಕಾಶ್ಮೀರ ವಿಷಯದ ಕುರಿತಂತೆ ಚೀನಾ ನಿಲುವು ಸ್ಪಷ್ಟವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಲು ಕಾಂಗ್ ತಿಳಿಸಿದ್ದಾರೆ.
 
ಭಾರತ ಮತ್ತು ಪಾಕಿಸ್ತಾನ ಸಂಭಾಷಣೆ ಮತ್ತು ಸಂವಹನವನ್ನು ಹೆಚ್ಚಿಸುವ ಮೂಲಕ ಸೂಕ್ತವಾದ ಸಮಸ್ಯೆಗಳನ್ನು ಸರಿಯಾಗಿ ನಿರ್ವಹಿಸಿ ಜಂಟಿಯಾಗಿ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಸಾಧ್ಯತೆಯಿದೆ" ಎಂದು ಹೇಳಿದ್ದಾರೆ.
 
57 ಸದಸ್ಯರ ಒಐಸಿ ಸಂಘಟನೆಯಲ್ಲಿ, ಪಾಕಿಸ್ತಾನದ ಸದಸ್ಯ ರಾಷ್ಟ್ರವಾಗಿದೆ. ಕಾಶ್ಮಿರದಲ್ಲಿ ವಿಶ್ವಸಂಸ್ಥೆಯ ನಿರ್ಣಯವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ