ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ

ಮಂಗಳವಾರ, 11 ಅಕ್ಟೋಬರ್ 2022 (15:11 IST)
ಕೀವ್ : ಎರಡು ದಿನಗಳ ಹಿಂದೆಯಷ್ಟೇ ರಷ್ಯಾಕ್ಕೆ ತಿರುಗೇಟು ನೀಡಿದ್ದ ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ ಮಾಡುವ ಮೂಲಕ ರಷ್ಯಾ ಸೇಡು ತೀರಿಸಿಕೊಂಡಿದೆ.

ರಷ್ಯಾ ಸೇನೆ ಸೋಮವಾರ ಬೆಳ್ಳಂಬೆಳಗ್ಗೆ (ಸ್ಥಳೀಯ ಸಮಯ ಬೆಳಗ್ಗೆ 8:15) ಅಬ್ಬರಿಸಿದೆ. ಉಕ್ರೇನ್ ರಾಜಧಾನಿ ಕೀವ್ ಮೇಲೆ ಹಲವು ಡೆಡ್ಲಿ ರಾಕೆಟ್ಗಳು ಏಕಕಾಲಕ್ಕೆ ದಾಳಿ ನಡೆದಿದ್ದು, ಹಲವು ಕಟ್ಟಡಗಳನ್ನ ಉಡೀಸ್ ಮಾಡಿದೆ.

ಕೀವ್ ನಗರದ ಹಲವೆಡೆ ಹೊಗೆ, ಧೂಳಿನ ಅಬ್ಬರ ಹೆಚ್ಚಾಗಿದ್ದು, ಹಲವು ಕಟ್ಟಡಗಳು ನೆಲಸಮವಾಗಿವೆ.  ಉಕ್ರೇನ್ ರಾಜಧಾನಿ ಕೀವ್ ಮಾತ್ರವಲ್ಲ, ಲಿವ್, ತೆರ್ನೋಪಿಲ್ ಸೇರಿದಂತೆ ಹಲವು ನಗರಗಳ ಮೇಲೆ ರಾಕೆಟ್ ದಾಳಿ ನಡೆದಿದೆ.

ಕೀವ್ ನಗರದಲ್ಲಿ ಭಾರೀ ಪ್ರಮಾಣದ ಸ್ಪೋಟದ ಸದ್ದು, ಹೊಗೆ, ಧೂಳು ಹಾಗೂ ಬೆಂಕಿ ತುಂಬಿಕೊಂಡಿದೆ. ಇದರಿಂದಾಗಿ ಕಿವ್ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ