ಸಂಘರ್ಷ : ಕಳವಳ ವ್ಯಕ್ತಪಡಿಸಿದ ಭಾರತ

ಗುರುವಾರ, 13 ಅಕ್ಟೋಬರ್ 2022 (08:39 IST)
ನವದೆಹಲಿ : ಉಕ್ರೇನ್ನಲ್ಲಿನ ಸಂಘರ್ಷ ಉಲ್ಬಣಗೊಳ್ಳುತ್ತಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಯುದ್ಧವನ್ನು ತಕ್ಷಣವೇ ನಿಲ್ಲಿಸಲು, ರಾಜತಾಂತ್ರಿಕತೆ ಮತ್ತು ತುರ್ತಾಗಿ ಮಾತುಕತೆ ನಡೆಸಲು ಭಾರತ ಕರೆ ನೀಡಿದೆ.

ಸಂಘರ್ಷದ ಕುರಿತು ಭಾರತದ ನಿಲುವನ್ನು ಪುನರುಚ್ಚರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಸಂಘರ್ಷವನ್ನು ಹೆಚ್ಚಿಸುವುದು ಯಾರ ಹಿತಾಸಕ್ತಿಯೂ ಅಲ್ಲ.

ಪರಿಸ್ಥಿತಿಯನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ಟ್ವೀಟ್ನಲ್ಲಿ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ