ಕಾರಿನಲ್ಲಿ ಸೀಟ್ಬೆಲ್ಟ್ ಹಾಕದ ರಿಷಿ ಸುನಾಕ್ಗೆ ದಂಡ

ಶನಿವಾರ, 21 ಜನವರಿ 2023 (10:40 IST)
ಲಂಡನ್ : ಸಾಮಾಜಿಕ ಮಾಧ್ಯಮದ ವೀಡಿಯೋವನ್ನು ಚಿತ್ರೀಕರಿಸುತ್ತಿದ್ದ ಸಂದರ್ಭ ಚಲಿಸುತ್ತಿದ್ದ ಕಾರಿನಲ್ಲಿ ಸೀಟ್ಬೆಲ್ಟ್ ಧರಿಸದಿದ್ದಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ಗೆ ದಂಡ ವಿಧಿಸಲಾಗಿದೆ.
 
ಚಲಿಸುತ್ತಿದ್ದ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಕ್ಕೆ ರಿಷಿ ಸುನಾಕ್ ಅವರಿಗೆ 100 ಪೌಂಡ್ (ಸುಮಾರು 10 ಸಾವಿರ ರೂ.) ದಂಡವನ್ನು ವಿಧಿಸಲಾಗಿದೆ ಎಂದು ಲಂಕಾಶೈರ್ ಪೊಲೀಸರು ತಿಳಿಸಿದ್ದಾರೆ.

ಲಂಕಾಶೈರ್ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಸೀಟ್ಬೆಲ್ಟ್ ಧರಿಸದೇ ಇರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಬಳಿಕ ನಾವು ಶುಕ್ರವಾರ ಲಂಡನ್ನ 42 ವರ್ಷದ ವ್ಯಕ್ತಿಗೆ ಷರತ್ತುಬದ್ಧವಾಗಿ ದಂಡ ವಿಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗುರುವಾರ ಸುನಾಕ್ ಇಂಗ್ಲೆಂಡ್ನ ವಾಯುವ್ಯ ಭಾಗದಲ್ಲಿ ಪ್ರಯಾಣ ಮಾಡುತ್ತಿದ್ದಾಗ ವೀಡಿಯೋವೊಂದನ್ನು ಚಿತ್ರೀಕರಿಸಲು ಸೀಟ್ಬೆಲ್ಟ್ ಅನ್ನು ತೆಗೆದಿದ್ದಾರೆ. ತಮ್ಮ ತಪ್ಪಿಗೆ ಅವರು ಬಳಿಕ ಕ್ಷಮೆಯನ್ನೂ ಯಾಚಿಸಿದ್ದಾರೆ. ಅವರು ಎಲ್ಲರಿಗೂ ಸೀಟ್ಬೆಲ್ಟ್ ಹಾಕಬೇಕು ಎಂಬುದನ್ನೇ ಹೇಳುತ್ತಾರೆ ಎಂದು ಸುನಾಕ್ ಅವರ ವಕ್ತಾರರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ