9 ದಿನಗಳು ಅವಶೇಷಗಳಲ್ಲಿ ಹುದುಗಿದ್ದ ರೋಮಿಯೊ ಬದುಕುಳಿಯುತ್ತದೆಂಬ ಆಸೆಯನ್ನು ಅದರ ಮಾಲೀಕರು ಕೈಬಿಟ್ಟಿದ್ದರು. ಆದರೆ ರೋಮಿಯೊನನ್ನು ಹೊರತೆಗೆದಾಗ ಅದರ ಜೀವಚೈತನ್ಯ ಕುಂದಿರಲಿಲ್ಲ. 9 ದಿನಗಳವರೆಗೆ ಜೀವವನ್ನು ಹಿಡಿದು ಅವಶೇಷಗಳಡಿಯಲ್ಲಿ ಅನ್ನ, ನೀರಿಲ್ಲದೇ ಕಾಲಕಳೆದಿತ್ತು. ಸುಮಾರು 230 ಗಂಟೆಗಳ ಬಳಿಕ ನೀರಿನ ಸೀಸೆಯಿಂದ ನೀರನ್ನು ಹೀರಿದ ರೋಮಿಯೊನನ್ನು ಅಗ್ನಿಶಾಮಕ ಸಿಬ್ಬಂದಿ ಕೆಳಗೆ ಬಿಟ್ಟಾಗ ತನ್ನನ್ನು ಜೀವಂತ ಕಾಣುವ ಆಸೆ ಕೈಬಿಟ್ಟಿದ್ದ ಮಾಲೀಕರ ಜತೆ ಪುನರ್ಮಿಲನಗೊಳ್ಳಲು ಅವಶೇಷಗಳ ರಾಶಿಯ ಕೆಳಗೆ ಬಾಲವಾಡಿಸುತ್ತಾ ಹಾದುಹೋಯಿತು.
ಭೂಕಂಪ ಅಪ್ಪಳಿಸಿದಾಗ ರೋಮಿಯೊ ಮಾಲೀಕರು ಮನೆಯ ಎರಡನೇ ಮಹಡಿಯಲ್ಲಿದ್ದರು. ಅವರು ಪಾರಾಗುವುದರಲ್ಲಿ ಯಶಸ್ವಿಯಾಗಿದ್ದು, ರೋಮಿಯೊ ಮೊದಲ ಮಹಡಿಯಲ್ಲಿದ್ದು ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿತ್ತು. ರೋಮಿಯೊಗಾಗಿ ಹಲವಾರು ಗಂಟೆಗಳು ಅವಶೇಷಗಳಲ್ಲಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. 9 ದಿನಗಳ ಬಳಿಕ ರೋಮಿಯೊ ಮರುಜೀವ ಪಡೆಯಿತು. ರೋಮಿಯೊ ಬದುಕಿದ್ದನ್ನು ಕಂಡ ಮಾಲೀಕರ ಸಂತೋಷಕ್ಕೆ ಪಾರವೇ ಇರಲಿಲ್ಲ.