ಶುಭಾಂಶು ಶುಕ್ಲ ಬದಲು ದಲಿತರನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು: ಕಾಂಗ್ರೆಸ್ ನಾಯಕ ಉದಿತ್ ರಾಜ್

Krishnaveni K

ಮಂಗಳವಾರ, 15 ಜುಲೈ 2025 (20:49 IST)
Photo Credit: X
ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 18 ದಿನಗಳ ಯಶಸ್ವೀ ಯಾತ್ರೆ ಮುಗಿಸಿ ಭಾರತೀಯ ಶುಭಾಂಶು ಶುಕ್ಲ ಇಂದು ಯಶಸ್ವಿಯಾಗಿ ಭೂಮಿಗೆ ಬಂದಿಳಿಯುತ್ತಿದ್ದಂತೇ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅಪಸ್ವರವೆತ್ತಿದ್ದಾರೆ. ಈ ಬಾರಿ ದಲಿತರನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು ಎಂದಿದ್ದಾರೆ.

ಶುಭಾಂಶು ಶುಕ್ಲ ವಾಪಸ್ ಆದ ಬೆನ್ನಲ್ಲೇ ಉದಿತ್ ರಾಜ್ ವಿವಾದಿತ ಹೇಳಿಕೆ ನೀಡಿದ್ದಾರೆ. ಕ್ಯಾಪ್ಟನ್ ಶುಕ್ಲ ಬದಲಿಗೆ ದಲಿತ ಅಭ್ಯರ್ಥಿಯನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂದು ಅವರು ಪ್ರಶ್ನೆ ಎತ್ತಿದ್ದಾರೆ. ಈ ಹಿಂದೆ ರಾಕೇಶ್ ಶರ್ಮಾ ಹೋಗುವಾಗ ದಲಿತರಲ್ಲಿ ವಿದ್ಯಾವಂತರಿರಲಿಲ್ಲ ಎಂದು ಒಪ್ಪೋಣ. ಆದರೆ ಈಗ ದಲಿತರಲ್ಲಿವಿದ್ಯಾವಂತರಿದ್ದಾರೆ. ಅವರನ್ನು ಕಳುಹಿಸಬಹುದಿತ್ತು ಎಂದಿದ್ದಾರೆ.

ಆದರೆ ಉದಿತ್ ರಾಜ್ ಈ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಿಮ್ಮ ರಾಜಕೀಯವನ್ನು ಇಲ್ಲಿಗೂ ತಂದು ಬೆರೆಸಿದರಾ? ಕನಿಷ್ಠ ಬಾಹ್ಯಾಕಾಶದಿಂದಾದರೂ ನಿಮ್ಮ ಕೀಳು ರಾಜಕೀಯವನ್ನು ದೂರವಿಡಿ ಎಂದು ಅನೇಕರು ಕಿಡಿ ಕಾರಿದ್ದಾರೆ.

ಇಡೀ ದೇಶವೇ ಶುಕ್ಲ ಸಾಧನೆಗೆ ಹೆಮ್ಮೆ ಪಡುತ್ತಿರುವಾಗ ಇಲ್ಲೂ ಜಾತಿ, ಮೀಸಲಾತಿ ಹುಡುಕುತ್ತೀರಲ್ಲಾ? ನಿಮಗೆ ಏನು ಹೇಳೋಣ? ಇಲ್ಲಾದರೂ ಮೀಸಲಾತಿ ಪಕ್ಕಕ್ಕಿಟ್ಟು ಅರ್ಹತೆ ಆಧಾರದಲ್ಲಿ ಅವಕಾಶ ಕೊಡಲಿ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ