ರಷ್ಯಾ ಸೈನಿಕಗೆ ಉಕ್ರೇನ್‌ ಜೀವಾವಧಿ ಶಿಕ್ಷೆ!

ಮಂಗಳವಾರ, 24 ಮೇ 2022 (12:11 IST)
ಕೀವ್ : ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಆರಂಭ ಆದ ಬಳಿಕ ತಾನು ಸೆರೆ ಹಿಡಿದಿದ್ದ ರಷ್ಯಾ ಯೋಧನಿಗೆ ಉಕ್ರೇನ್ ಮೊದಲ ಬಾರಿ ಶಿಕ್ಷೆ ಘೋಷಿಸಿದೆ.

ಯುದ್ಧಾಪರಾಧಗಳ ವಿಚಾರಣೆ ನಡೆಸಿರುವ ಉಕ್ರೇನ್ ಕೋರ್ಚ್, ರಷ್ಯಾ ಸೈನಿಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಯುದ್ಧದ ಆರಂಭದ ದಿನಗಳಲ್ಲಿ ರಷ್ಯಾ ಸೇನೆಯ ಸಾರ್ಜೆಂಟ್ ಶಿಶಿಮಾರಿನ್ ಎಂಬಾತ ಈಶಾನ್ಯ ಉಕ್ರೇನ್ನ ಸುಮಿ ಪ್ರದೇಶದಲ್ಲಿ ನಾಗರಿಕರೊಬ್ಬರ ಹಣೆಗೆ ಗುಂಡಿಟ್ಟು ಹತ್ಯೆ ಮಾಡಿದ್ದ.

ರಷ್ಯಾ ಪಡೆಗಳ ಬಗ್ಗೆ ಉಕ್ರೇನ್ ಸೇನೆಗೆ ಮಾಹಿತಿ ನೀಡುತ್ತಿರಬಹುದು ಎಂಬ ಕಾರಣಕ್ಕೆ ಫೋನ್ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಈ ಕೆಲಸ ಮಾಡಿದ್ದಾಗಿ ಆ ಸೈನಿಕ ಕೋರ್ಚ್ ಎದುರು ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಶಿಕ್ಷೆ ಘೋಷಿಸಲಾಗಿದೆ.

ಉಕ್ರೇನ್ ಕೋರ್ಚ್ ಈ ನಿರ್ಧಾರ ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ಮತ್ತಷ್ಟುತುಪ್ಪ ಸುರಿವ ಸಾಧ್ಯತೆ ಇದೆ. ತಿಂಗಳಿನಿಂದಲೂ ನಡೆಯುತ್ತಿರುವ ಈ ಯುದ್ಧದಿಂದಾಗಿ ಲಕ್ಷಾಂತರ ಉಕ್ರೇನಿಗರು ನಲುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ