ಉಕ್ರೇನ್‌ ಶಾಲೆ ಮೇಲಿನ ರಷ್ಯಾ ದಾಳಿಗೆ 60 ಬಲಿ!

ಮಂಗಳವಾರ, 10 ಮೇ 2022 (19:51 IST)
ಉಕ್ರೇನ್‌ ಮೇಲಿನ ದಾಳಿ ಮುಂದುವರೆಸಿರುವ ರಷ್ಯಾ, ನಿರಾಶ್ರಿತರು ಉಳಿದುಕೊಂಡಿದ್ದ ಶಾಲೆಯೊಂದರ ಮೇಲೆ ಭೀಕರ ಬಾಂಬ್‌ ದಾಳಿ ನಡೆಸಿದ್ದು, ಅದರಲ್ಲಿ 60 ಜನರು ಸಾವನ್ನಪ್ಪಿದ್ದಾರೆ. ಪೂರ್ವ ಉಕ್ರೇನ್‌ನ ಲುಹಾನ್ಸ್‌ನಲ್ಲಿರುವ ಶಾಲೆಯೊಂದರಲ್ಲಿ 90 ಜನ ನಿರಾಶ್ರಿತರು ಉಳಿದುಕೊಂಡಿದ್ದರು. ಈ ಕಟ್ಟಡದ ಮೇಲೆ ರಷ್ಯಾ ಭಾರೀ ಪ್ರಮಾಣದ ಬಾಂಬ್‌ ದಾಳಿ ನಡೆಸಿದ್ದು, ದಾಳಿಯ ತೀವ್ರತೆಗೆ ಇಡೀ ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ಮಾತ್ರವಲ್ಲದೇ, ಇಡೀ ಕಟ್ಟಡವೇ ಧರಾಶಾಹಿಯಾಗಿದೆ. ಘಟನೆಯಲ್ಲಿ ಹಲವರು ಬೆಂಕಿ ಹೊತ್ತಿಕೊಂಡು ಸಾವನ್ನಪ್ಪಿದ್ದರೆ, ಇನ್ನು ಕೆಲವರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿ ಸಾವಿಗೀಡಾಗಿದ್ದಾರೆ ಎಂದು ಲುಹಾನ್ಸ್‌ನ ಗವರ್ನರ್‌ ಸೆರ್ಹಿ ಗೈಡೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ